ಲೆನಿನ್ ಅವರ ಪ್ರತಿಮೆ ನಾಶಪಡಿಸಿರುವುದಕ್ಕೆನನಗೆ ಬಹಳ ಸಂತೋಷವಾಗುತ್ತಿದೆ. ಅಧಿಕಾರದ ಆಸೆಯಿಂದಾಗಿ ತ್ರಿಪುರಾದಲ್ಲಿ ಲೆನಿನ್ ಅವರ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿತ್ತು. ಭಾರತಕ್ಕೆ ಲೆನಿನ್ ಅವರು ನೀಡುರುವ ಕೊಡುಗೆಯಾದರೂ ಏನು? ಲೆನಿನ್ ಪ್ರತಿಮೆ ಅವಮಾನದ ಸಂಕೇತವಾಗಿದ್ದು, ಅವರ ಎಲ್ಲಾ ಪ್ರತಿಮೆಗಳನ್ನು ಧ್ವಂಸಗೊಳಿಸಬೇಕು. ರಷ್ಯಾದ ಕಮ್ಯುನಿಸ್ಟ್ ನಾಯಕ ಹಲವಾರು ಜನರನ್ನು ಹತ್ಯೆ ಮಾಡಿದ್ದು. ಆತನನ್ನು ಭಾರತದ ಅಹಿಂಸೆ ಹಾಗೂ ಮಾನವೀಯತೆಯ ಸಿದ್ಧಾಂತದೊಂದಿಗೆ ಹೋಲಿಕೆ ಮಾಡಬಾರದು. ಆತ ಎಂದಿಗೂ ತನ್ನ ಆಡಲಿತದಲ್ಲಿ ಸಮಾನತೆಯನ್ನು ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.