ಮಹಾರಾಷ್ಟ್ರ ರೈತರ ಬೇಡಿಕೆಗಳು ಇವು; ಮಾತುಕತೆಗೆ ಸರ್ಕಾರದ 5 ಸದಸ್ಯರ ಸಮಿತಿ

ಅಖಿಲ ಭಾರತ ಕಿಸಾನ್ ಸಭಾದ ವತಿಯಿಂದ ಮಹಾರಾಷ್ಟ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.ಅಖಿಲ ಭಾರತ ಕಿಸಾನ್ ಸಭಾದ ಇನ್ನಿತರ ಬೇಡಿಕೆಗಳು ಇಂತಿವೆ.
ಅಜಾದ್ ಮೈದಾನದಲ್ಲಿ ಪ್ರತಿಭಟನಾನಿರತ ರೈತರ ಚಿತ್ರ
ಅಜಾದ್ ಮೈದಾನದಲ್ಲಿ ಪ್ರತಿಭಟನಾನಿರತ ರೈತರ ಚಿತ್ರ
Updated on: 

ಮಹಾರಾಷ್ಟ್ರ : ಸ್ವಾಮಿನಾಥನ್ ಆಯೋಗದ ಶಿಫಾರಸ್ಸು ಜಾರಿ ಹಾಗೂ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಸೇರಿದಂತೆ  ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಖಿಲ ಭಾರತ ಕಿಸಾನ್ ಸಭಾದ ವತಿಯಿಂದ ಮಹಾರಾಷ್ಟ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.

ಅಖಿಲ ಭಾರತ ಕಿಸಾನ್ ಸಭಾದ ಇನ್ನಿತರ ಬೇಡಿಕೆಗಳು ಇಂತಿವೆ.
* ಸಾರ್ವಜನಿಕ ಪಡಿತರ ವ್ಯವಸ್ಥೆ ಇತ್ಯರ್ಥಪಡಿಸಬೇಕು.
* ಬಡ ರೈತರು ಹಾಗೂ ಕೃಷಿ ಕಾರ್ಮಿಕರ ಪಿಂಚಣಿ ಯೋಜನೆಯನ್ನು ಹೆಚ್ಚಿಸಬೇಕು,
* ಸುಪರ್ ಹೈವೆ. ಬುಲೆಟ್ ರೈಲುಗಳಂತ ಜನ ವಿರೋಧಿ  ಯೋಜನೆಗಾಗಿ ರೈತರ ಭೂಮಿಯನ್ನು ಪಡೆಯುವುದು ಅನಗತ್ಯವಾದದ್ದು.
* ದೇವಾಲಯ ಭೂಮಿ ಮತ್ತು ಹುಲ್ಲುಗಾವಲು ಭೂಮಿಗಳು ಪಟ್ಟಭದ್ರ ಹಿತಾಸಕ್ತಿಗಳ ಉಳುಮೆಗಾಗಿ ಪಾಲಾಗುವುದು ತಪ್ಪಿಸಬೇಕು.
* ನಾಸಿಕ್ ,ಥಾಣೆ, ಮತ್ತು ಪಾಲ್ಗಾರ್  ಜಿಲ್ಲೆಯಲ್ಲಿನ ಅಂತರ್ ಜಿಲ್ಲಾ ನದಿ ಜೋಡಣೆ ಯೋಜನೆಯನ್ನು ಬದಲಾಯಿಸಬೇಕು.
* ಈ ನದಿಗಳಲ್ಲಿ ನೀರು ಸಂಗ್ರಹವಿರುವಂತೆ ನೋಡಿಕೊಳ್ಳಬೇಕು, ಇದರಿದ ಬರ ಪೀಡಿತ ಜಿಲ್ಲೆಗಳಿಗೆ ನೀರು ಪೂರೈಸಬೇಕು. ಬುಡಕಟ್ಟು ಗ್ರಾಮಗಳನ್ನು ಇದರಲ್ಲಿ ಸೇರಿಸಬಾರದು.
* ಸ್ವಾಮಿನಾಥನ್ ಆಯೋಗ ಶಿಫಾರಸ್ಸು ಹಾಗೂ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಬೇಕು.
* ಕೃಷಿ ಉತ್ಪನ್ನಗಳಿಗೆ ಸೂಕ್ತ ದರ ನಿಗದಿಪಡಿಸಬೇಕು.
* ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದ ಸಿಎಂ ಫಡ್ನಾವೀಸ್ ನಂತರ ಯೂ ಟರ್ನ್ ಹೊಡೆದಿದ್ದು, ಸಾಲ ಮನ್ನಾ ಮಾಡಬೇಕು ಎಂಬುದು ಈ ರೈತರ ಪ್ರಮುಖ ಬೇಡಿಕೆಗಳಾಗಿವೆ.

ರೈತರ ಪ್ರತಿಭಟನೆ ವಿಷಯ ಕುರಿತು ಮಹಾರಾಷ್ಟ್ರ ಆಸೆಂಬ್ಲಿಯಲ್ಲೂ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಮುಖ್ಯ ದೇವೇಂದ್ರ ಫಡ್ನವೀಸ್, ಪ್ರತಿಭಟನಾಕಾರರು ಬೇಡಿಕೆಗಳು ಪ್ರಮುಖವಾಗಿವೆ.ಶೇ 90ರಿಂದ 95 ರಷ್ಟು ಮಂದಿ ಬುಡಕಟ್ಟಿನ ಬಡ ಜನರು ಪಾಲ್ಗೊಂಡಿದ್ದಾರೆ. ಅರಣ್ಯ ಭೂಮಿ ಹಕ್ಕಿಗಾಗಿ ಅವರು ಹೋರಾಟ ನಡೆಸುತ್ತಿದ್ದಾರೆ. ಅವರು ಭೂಮಿ ಕಳೆದುಕೊಂಡಿದ್ದು, ಬೇಸಾಯ ಮಾಡದಂತಾಗಿದೆ. ಅವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ರೈತರ ಸಮಸ್ಯೆ ಬಗೆಹರಿಸಲು ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್, ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್, ಸೇರಿದಂತೆ  ಐವರು ಸದಸ್ಯರ ಸಮಿತಿ ರಚಿಸಲಾಗಿದ್ದು, ನಿಗದಿತ ಸಮಯದೊಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಫಡ್ನವೀಸ್ ಭರವಸೆ ನೀಡಿದ್ದಾರೆ.

ಸಂಚಾರ ನಿರ್ವಹಣೆ ಮತ್ತು ಆಂಬ್ಯುಲೆನ್ಸ್ ಗಳಿಗೆ  ಎಲ್ಲಾ ನೆರವು ನೀಡಲಾಗುವುದು  ಈ ಮಧ್ಯೆ ಮಾತುಕತೆಗಾಗಿ ರೈತ ಮುಖಂಡರನ್ನು ನಾಳೆ ವಿಧಾನಭವನಕ್ಕೆ ಆಹ್ವಾನಿಸಲಾಗುವುದು ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com