2025ರೊಳಗೆ ದೇಶವನ್ನು ಟಿಬಿ ಮುಕ್ತ ರಾಷ್ಟ್ರವಾಗಿಸುತ್ತೇವೆ: ಪ್ರಧಾನಿ ಮೋದಿ

2025ರ ವೇಳೆಗೆ ಭಾರತವನ್ನು ಟಿಬಿ ಮುಕ್ತ ರಾಷ್ಟ್ರವಾಗಿಸುತ್ತೇವೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: 2025ರ ವೇಳೆಗೆ ಭಾರತವನ್ನು ಟಿಬಿ ಮುಕ್ತ ರಾಷ್ಟ್ರವಾಗಿಸುತ್ತೇವೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ. 
ಟ್ಯೂಬರ್ ಕ್ಯುಲೊಸಿಸ್ ಶೃಂಗಸಭೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿರುವ ಅವರು, ಹಲವಾರು ಪ್ರಯತ್ನಗಳ ಬಳಿಕವೂ ಟಿಬಿಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ. ಆದರೆ, ಮುಂಬರುವ ದಿನಗಳಲ್ಲಿ ಮತ್ತಷ್ಟು ಸಮರ್ಥ ಕ್ರಮಗಳನ್ನು ಕೈಗೊಂಡು 2025ರ ವೇಳೆಗೆ ಭಾರತವನ್ನು ಟಿಬಿ ಮುಕ್ತ ರಾಷ್ಟ್ರವಾಗಿಸುತ್ತೇವೆಂದು ಹೇಳಿದ್ದಾರೆ. 
ಭಾರತವನ್ನು ಟಿಬಿ ಮುಕ್ತ ರಾಷ್ಟ್ರವಾಗಿರುವ ಅಗತ್ಯವಿದೆ. ಟಿಬಿಯನ್ನು ಮುಕ್ತಗೊಳಿಸಲು ವಿಶ್ವ ಆರೋಗ್ಯ ಸಂಸ್ಥೆ 2030ರ ಗುರಿಯನ್ನು ಇಟ್ಟುಕೊಂಡಿದೆ. ಆದರೆ, ಅದಕ್ಕೂ ಐದು ವರ್ಷಕ್ಕೂ ಮೊದಲೇ ಭಾರತವನ್ನು ಟಿಬಿ ಮುಕ್ತ ರಾಷ್ಟ್ರವಾಗಿಸುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಟಿಬಿ ರೋಗದಿಂದ ಬಳಲುತ್ತಿರುವ ಬಹುತೇಕ ಜನರಲ್ಲಿ ಬಡವರೇ ಹೆಚ್ಚಾಗಿದ್ದಾರೆ. ಹೀಗಾಗಿ ಟಿಬಿ ಮುಕ್ತಗೊಳಿಸಲು ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮಗಳೂ ನೇರವಾಗಿ ಬಡವರಿಗೆ ಸಂಪರ್ಕವನ್ನು ಹೊಂದಿರುತ್ತದೆ. ಕಾರ್ಯಕ್ರದಲ್ಲಿ ಅನೇಕ ರಾಜ್ಯಗಳ ಹಲವಾರು ಸಚಿವರುಗಳು ಹಾಗೂ ಅಧಿಕಾರಿಗಳು ಹಾಜರಿಸಿದ್ದಾರೆ. ಇದನ್ನು ನೋಡಿದರೆ, ಭಾರತವನ್ನು ಟಿಬಿ ಮುಕ್ತಗೊಳಿಸಲು ಎಷ್ಟರಮಟ್ಟಿಗೆ ಒಗ್ಗಟ್ಟಿದೆ ಎಂಬುದನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com