ರೂ.13 ಸಾವಿರ ಮಿತಿಯ ಎಸ್‏ಬಿಐ ಕಾರ್ಡ್ ಬಳಸಿ ರೂ.9.1 ಕೋಟಿ ಖರ್ಚು ಮಾಡಿದ ಮುಂಬೈ ನಿವಾಸಿ!

13 ಸಾವಿರ ಮಿತಿಯ ಎಸ್ ಬಿಐ ಕಾರ್ಡ್ ಬಳಸಿ ಬ್ರಿಟಿಷ್ ಇ- ಕಾಮರ್ಸ್ ವೆಬ್ ಸೈಟ್ ನಲ್ಲಿ ಮುಂಬೈನ ನಿವಾಸಿಯೊಬ್ಬರು 9.1 ಕೋಟಿ ರೂಪಾಯಿ ಖರ್ಚು ಮಾಡಿರುವುದನ್ನು ಸಿಬಿಐ ಪತ್ತೆ ಹಚ್ಚಿದ್ದು, ಈ ಸಂಬಂಧ ಎಫ್ ಐಆರ್ ದಾಖಲಿಸಿಕೊಂಡಿದೆ.

ನವದೆಹಲಿ:   13 ಸಾವಿರ ಮಿತಿಯ  ಎಸ್ ಬಿಐ ಕಾರ್ಡ್ ಬಳಸಿ  ಬ್ರಿಟಿಷ್ ಇ- ಕಾಮರ್ಸ್ ವೆಬ್ ಸೈಟ್ ನಲ್ಲಿ ಮುಂಬೈನ ನಿವಾಸಿಯೊಬ್ಬರು 9.1 ಕೋಟಿ ರೂಪಾಯಿ  ಖರ್ಚು ಮಾಡಿರುವುದನ್ನು ಸಿಬಿಐ ಪತ್ತೆ ಹಚ್ಚಿದ್ದು, ಈ ಸಂಬಂಧ ಎಫ್ ಐಆರ್ ದಾಖಲಿಸಿಕೊಂಡಿದೆ.

ಈ ಪ್ರಕರಣ ಸಂಬಂಧ  ಸಿಬಿಐನಲ್ಲಿ ದೂರು ದಾಖಲಿಸಿರುವ ಎಸ್ ಬಿಐ, ಯಲಮಂಚಿಳಿ  ಸಾಪ್ಟ್ ವೇರ್  ಕಂಪನಿ  ಒದಗಿಸಿದ ಅರ್ಜಿ ಆಧಾರದ ಮೇಲೆ ನವಿ ಮುಂಬೈಯಲ್ಲಿನ  ಅನಿವಾಸಿ ಸಾಗರೊತ್ತರ ಬ್ರಾಂಚಿನಿಂದ ವಿದೇಶಿ ಪ್ರಯಾಣ ಕಾರ್ಡನ್ನು ನೀಡಲಾಗಿದೆ ಎಂದು ತಿಳಿಸಿದೆ.

ನವೆಂಬರ್ 8 2016 ರಿಂದ ಫೆಬ್ರವರಿ 12,2017ರವರೆಗಿನ ಮೂರು ತಿಂಗಳ ಅವಧಿಯಲ್ಲಿ ಇಂತಹ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದ್ದು,
ನಾಲ್ಕು ವ್ಯಾಪಾರಿಗಳ ಇ- ಕಾಮರ್ಸ್ ವೆಬ್ ಸೈಟ್  ನಲ್ಲಿ   374 ವಹಿವಾಟು ಸೇರಿದಂತೆ   1.41 ಮಿಲಿಯನ್ ಡಾಲರ್  ಖರ್ಚು ಮಾಡಿರುವುದನ್ನು  ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ 7, 2016 ರಂದು ಅನಿವಾಸಿ ಸಾಗರೋತ್ತರ ಬ್ರಾಂಚಿನಿಂದ ಕಾರ್ಡ್ ನೀಡಲಾಗಿದೆ. ಕಾರ್ಡ್ ದಾರರಿಂದ ಎರಡಕ್ಕಿಂತ ಹೆಚ್ಚು ಕಾರ್ಡ್ ಪಡೆಯಲಾಗಿದೆ ಎಂದು ಬ್ಯಾಂಕ್ ಆರೋಪಿಸಿದೆ.

ಗ್ರೇಟ್ ಬ್ರಿಟನ್ ದೇಶದ ಸಂಕೇತ ಹೊಂದಿದ್ದ ನಾಲ್ಕು ವ್ಯಾಪಾರಿಗಳ ವೀಸಾ ಹಾಗೂ ಅಮೆರಿಕಾದ ಡಾಲರ್ ಬಿಲ್ಲಿಂಗ್ ನಲ್ಲಿ  ವಹಿವಾಟು ನಡೆದಿದೆ ಎಂದು ಬ್ಯಾಂಕ್ ಆರೋಪಿಸಿದ್ದು,  ಪ್ರಿಪೇಯ್ಡ್ ಕಾರ್ಡ್ ವ್ಯವಸ್ಥೆಯಲೂ ವಹಿವಾಟು ನಡೆದಿರಬಹುದೆಂದು ಶಂಕೆ ವ್ಯಕ್ತಪಡಿಸಿದೆ.

ವಂಚನೆ, ನಕಲಿ ಮತ್ತ ಮಾಹಿತಿ ತಂತ್ರಜ್ಞಾನ ಕಾಯ್ಗೆ ಉಲ್ಲಂಘನೆ ಸೇರಿದಂತೆ ಮತ್ತಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಪೂಜಾರಿ ಹಾಗೂ ಇನ್ನಿತರ ಮೇಲೆ ಸಿಬಿಐ ಕೇಸ್ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದೆ.





ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com