ವಿದೇಶಿ ಕಾನೂನು ಸಂಸ್ಥೆಗಳು, ವಕೀಲರು ಭಾರತದಲ್ಲಿ ಕಾರ್ಯಾಚರಿಸಲು ಅನುಮತಿ ಇಲ್ಲ: ಸುಪ್ರೀಂ ಕೋರ್ಟ್

ವಿದೇಶೀ ಕಾನೂನು ಸಂಸ್ಥೆಗಳಿಗೆ ಭಾರತದಲ್ಲಿ ಕಾನೂನು ವ್ಯವಹಾರ ನಡೆಸಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ವಿದೇಶೀ ಕಾನೂನು ಸಂಸ್ಥೆಗಳಿಗೆ ಭಾರತದಲ್ಲಿ ಕಾನೂನು ವ್ಯವಹಾರ ನಡೆಸಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಆದರ್ಶ ಕೆ.ಗೋಯಲ್ ಹಾಗೂ ಉದಯ್ ಯು.ಲಲಿತ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದ್ದು ಈ ಹಿಂದೆ ಬಾಂಬೆ ಹಾಗೂ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ. ಇದೇ ವೇಳೆ ಸರ್ವೋಚ್ಚ ನ್ಯಾಯಾಲಯವು ಹೈಕೋರ್ಟ್ ಗಳ ತೀರ್ಪಿನಲ್ಲಿ ಕೆಲ ಬದಲಾವಣೆಗಳನ್ನು ಸಹ ಮಾಡಿದೆ.
ವಿದೇಶೀ ಕಾನೂನು ಸಂಸ್ಥೆಗಳು ಭಾರತದಲ್ಲಿ ಅವರ ಕಾನೂನು ಅನುಸಾರ ಕಕ್ಷಿದಾರರಿಗೆ ಸೇವೆ ಸಲ್ಲಿಸುತ್ತದೆ. ಭಾರತದಲ್ಲಿ ಕಾನೂನು ಸೇವೆ ಒದಗಿಸುವ ಹೊರಗುತ್ತಿಗೆ ಸಂಸ್ಥೆಗಳು ನಮ್ಮ ವಕೀಲರ ಕಾಯ್ದೆಯಡಿಯಲ್ಲಿ ಕಾರ್ಯ ನಿರ್ವಹಿಸುವುದು ಅಗತ್ಯವಲ್ಲ.  ವಿದೇಶೀ ಕಾನೂನು ಸಂಸ್ಥೆಗಳು ಕಾನೂನು ಸಲಹೆ ನೀಡುವುದಕ್ಕಾಗಿ ದೇಶದೊಳಗೆ ಪ್ರವೇಶಿಸಬಹುದು, ಮತ್ತೆ ಮರಳಿ ಹೋಗಬಹುದು. ಆದರೆ ಭಾರತದಲ್ಲಿ ಖಾಯಂ ಕಛೇರಿ ಹೊಂದುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
2017ರ ಜನವರಿಯಲ್ಲಿ ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯ  ಕಾನೂನು ತಿದ್ದುಪಡಿ ಮಾಡಿದ್ದು ವಿದೇಶಿ ಕಾನೂನು ಘಟಕಗಳು ಭಾರತದಲ್ಲಿ ಕಛೇರಿ ತೆರೆಯುವುದಕ್ಕೆ ಅವಕಾಶ ಕಲ್ಪಿಸಿತ್ತು. ಇದಲ್ಲದೆ ಭಾರತದಲ್ಲಿನ ವಿಶೇಷ ಆರ್ಥಿಕ ವಲಯದ ಕಕ್ಷಿದಾರರಿಗೆ ಕಾನೂನು ಸಲಹೆ, ಕಾನೂನು ಸೇವೆಗಳನ್ನು ಒದಗಿಸಲು ಅವಕಾಶ ನಿಡಲಾಗಿತ್ತು. ಆದರೆ ಹೀಗೆ ಕೇಂದ್ರ ಸರ್ಕಾರ ತಿದ್ದುಪಡಿ ಮೂಲಕ ವಿದೇಶೀ ಕಾನೂನು ಸಂಸ್ಥೆಗಳಿಗೆ ದೇಶದಲ್ಲಿ ಕಾರ್ಯಾಚರಿಸಲು ಅವಕಾಶ ನಿಡಿದ ಕ್ರಮವನ್ನು ಕಾನೂನು ತಜ್ಞರು ವಿರೋಧಿಸಿದ್ದರು.
ವಿದೇಶೀ ಕಾನೂನು ಸಂಸ್ಥೆಗಳಿಗೆ ದೇಶದಲ್ಲಿ ಕೆಲಸ ಮಾಡಲು ಅನುಮತಿ ನೀಡುವ ಅಧಿಕಾರ ಕಾನೂನು ಮತ್ತು ನ್ಯಾಯಾಲಯ ವ್ಯವಹಾರಗಳ ಸಚಿವಾಲಯಕ್ಕೆ ಮಾತ್ರವೇ ಇದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದರು.ಇದೀಗ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂದು ಹೇಳಕಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com