ಮೃತ ತಂದೆಯ ಆಧಾರ್ ಬಯೋಮೆಟ್ರಿಕ್ ದಾಖಲೆ ಹಿಂಪಡೆಯಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಗ!

ಆಧಾರ್ ಕಾರ್ಡ್ ಗಾಗಿ ತನ್ನ ಮೃತಪಟ್ಟಿರುವ ತಂದೆಯು ನೀಡಿದ್ದ ಬಯೋಮೆಟ್ರಿಕ್ ದಾಖಲೆಗಳನ್ನು ಯುಐಡಿಎಐ ಹಿಂತಿರುಗಿಸಬೇಕೆಂದು ಕೋರಿ ಮಾನವ ಸಂಪನ್ಮೂಲ ವ್ಯವಸ್ಥಾಪಕರೊಬ್ಬರು ........
ಮೃತ ತಂದೆಯ ಆಧಾರ್ ಬಯೋಮೆಟ್ರಿಕ್ ದಾಖಲೆ ಹಿಂಪಡೆಯಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಗ!
ಮೃತ ತಂದೆಯ ಆಧಾರ್ ಬಯೋಮೆಟ್ರಿಕ್ ದಾಖಲೆ ಹಿಂಪಡೆಯಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಗ!
Updated on: 
ನವದೆಹಲಿ: ಆಧಾರ್ ಕಾರ್ಡ್ ಗಾಗಿ ತನ್ನ ಮೃತಪಟ್ಟಿರುವ  ತಂದೆಯು ನೀಡಿದ್ದ ಬಯೋಮೆಟ್ರಿಕ್ ದಾಖಲೆಗಳನ್ನು ಯುಐಡಿಎಐ ಹಿಂತಿರುಗಿಸಬೇಕೆಂದು ಕೋರಿ ಮಾನವ ಸಂಪನ್ಮೂಲ ವ್ಯವಸ್ಥಾಪಕರೊಬ್ಬರು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿರುವ ವಿಶೇಷ ಪ್ರಕರಣ ವರದಿಯಾಗಿದೆ. 
ಬೆಂಗಳೂರು ಮೂಲದ ಮಾನವ ಸಂಪನ್ಮೂಲ ವ್ಯವಸ್ಥಾಪಕರು ತಮ್ಮ ತಂದೆಯ ಬಯೋಮೆಟ್ರಿಕ್ ದಾಖಲೆ ಮರುಪಡೆಯುವ ಸಲುವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
"ನನ್ನ ತಂದೆಯು ಮೃತಪತ್ಟಿದ್ದು ಅವರ ಬಯೋಮೆಟ್ರಿಕ್ ದಾಖಲೆಗಳು ಯುಐಡಿಎಐ ಬಳಿ ಇದೆ. ಇದರಿಂದ ಯುಐಡಿಎಐ  ಗೆ ಏನೂ ಉಪಯೋಗವಿಲ್ಲ. ಅಲ್ಲದೆ ಯುಐಡಿಎಐ ಈ ದಾಖಲೆಗಳನ್ನು ದುರುಪಯೋಗಪಡಿಸಿಕೊಳ್ಳಬಹುದಾಗಿದೆ. ಆದ ಕಾರಣ ನನಗೆ ನನ್ನ ತಂದೆಯ ದಾಖಲೆಗಳು ಮರಳಿ ಸಿಗಬೇಕು" ಸಂತೋಷ್ ಮಿನ್ ಬಿ. ಹೇಳಿದ್ದಾರೆ.
ಆಯುರ್ವೇದ ಚಿಕಿತ್ಸಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂತೋಷ್ ಅವರ ತಂದೆ ವಯೋಸಹಜ ದುರ್ಬಲರಾಗಿದ್ದರು. ಅವರ ಕಣ್ಣುಗಳಿಗೆ ಪೊರೆ ಶಸ್ತ್ರಚಿಕಿತ್ಸೆಯೂ ಆಗಿತ್ತು. ಹೀಗಾಗಿ ಅವರ ಕಣ್ಣಿನ ಬಯೋಮೆಟ್ರಿಕ್ ದಾಖಲಾತಿಗಳನ್ನು ಪಡೆಯುವುದು ಬೆಂಗಳೂರಿನ ಭವಿಷ್ಯ ನಿಧಿ ಕಛೇರಿಗೆ ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಕಛೇರಿ ಸಿಬ್ಬಂದಿ ಅವರನ್ನು ಅವಮಾನಿಸಿದ್ದರು. ಇದೇ ವೇದನೆಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಎನ್ನುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮುಖ್ಯ ನ್ಯಾಯ್ಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ಪಂಚ ಸದಸ್ಯರ ಪೀಠವು ಸಂತೋಷ್ ಗೆ ಪ್ರಕರಣ ಸಂಬಂಧ ವಾದಿಸಲು ಕೇವಲ ಎರಡು ನಿಮಿಷದ ಕಾಲಾವಕಾಶವನ್ನು ನೀಡಿತ್ತು. ಇದನ್ನು ಅವರು ಆಧಾರ್ ಒಂದು ’ಘೋಷಿತ ತುರ್ತು ಸ್ಥಿತಿ’ ಎಂದು ಬಣ್ಣಿಸಿದ್ದಾರೆ.
"ಘನ ನ್ಯಾಯಾಲಯವು ನನ್ನ ತಂದೆಯ ಬಯೋಮೆಟ್ರಿಕ್ ದಾಖಲೆಗಳನ್ನು ಮುದ್ರಿತ ಪ್ರತಿಗಳ ರೂಪದಲ್ಲಿ ನನಗೆ ನೀಡುವಂತೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ ಆದೇಶಿಸಬೇಕು. ನಾನದನ್ನು ಜೋಪಾನವಾಗಿ ಕಾಪಾಡಿಕೊಳ್ಳುತ್ತೇನೆ" ಸಂತೋಷ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರ. "ನನ್ನ ತಂದೆ ಡಿ.31, 2016ರಂದು ಸಾವನ್ನಪ್ಪಿದ್ದರು. ಅದು ನನ್ನ ಬಾಳಿನ ಕರಾಳ ದಿನ. ಅದೇ ದಿನ ಸರ್ಕಾರ ಜಾರಿಗೆ ತಂದಿದ್ದ ಅನಾಣ್ಯೀಕರಣದ ಅವಧಿ ಮುಕ್ತಾಯವಾಗಿತ್ತು. ಎಂದು ಸಂತೋಷ್ ಹೇಳಿದ್ದಾರೆ.
ಅಲ್ಲದೆ ಸಂತೋಷ್ ಅವರ ತಂದೆ ಎನ್. ಭಾನು ಪ್ರಧಾನಿಗೆ ಬರೆದು ಕಳಿಸಿದ್ದ ಪತ್ರದ ಅರ್ಧ ನಕಲನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಭಾನು ಅವರು ಆ ಪತ್ರದಲ್ಲಿ ಒಬ್ಬ ಅನಾರೋಗ್ಯಪೀಡಿತ ವ್ಯಕ್ತಿ, ವೃದ್ದರು ಭವಿಷ್ಯ ನಿಧಿ ಕಛೇರಿಗಳಲ್ಲಿ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಭರ್ತಿ ಮಾಡುವಾಗ ಅಲ್ಲಿನ ಅಧಿಕಾರಿಗಳು ನೀಡುವ ಕಿರುಕುಳದ ಬಗೆಗೆ ವಿವರಿಸಿದ್ದರು.
"ಆಧಾರ್ ಕಡ್ಡಾಯ ಯೋಜನೆ ಹಿನ್ನೆಲೆಯಲ್ಲಿ ಓರ್ವ ಸಾಮಾನ್ಯ ವ್ಯಕ್ತಿ ಗಳಿಸಿರುವ ಪ್ರತಿ ಪೈಸೆಯ ಲೆಕ್ಕವನ್ನೂ ಸರ್ಕಾರ ಗಮನಿಸಲು ಬಯಸುತ್ತದೆ. ಇನ್ನೊಂದೆಡೆ ಚುನಾವಣಾ ಬಾಂಡ್ ರೂಪದಲ್ಲಿ ರಾಜಕೀಯ ಪಕ್ಷಗಳು ಹಣ ಪಡೆಯುವ ಕುರಿತ ಅನುಕೂಲ ಕಲ್ಪಿಸಲಾಗಿದೆ- ಇದು ವಿರೋಧಾಭಾಸ" ಸಂತೋಷ್ ಹೇಳಿದ್ದು ಇದೀಗ ತನ್ನ ತಂದೆ ಸಾವನ್ನಪ್ಪಿರುವ ಕಾರಣ ಯುಐಡಿಎಐ  ಗೆ ಅವರ ಬಯೋಮೆಟ್ರಿಕ್ ದಾಕಲೆಗಳಿಂದ ಪ್ರಯೋಜನವಾಗದು ಎಂದಿದ್ದಾರೆ.
ನ್ಯಾಯಾಲಯವು ಸಂತೋಷ್ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು  ಮಾ.20ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com