ನಿರ್ಮಲಾ ಸೀತಾರಾಮನ್
ದೇಶ
ಡೋಕ್ಲಾಮ್ ವಿವಾದ ಮರುಕಳಿಸುವುದೆಂದು ನಾನು ಭಾವಿಸಲಾರೆ: ನಿರ್ಮಲಾ ಸೀತಾರಾಮನ್
"ಚಿನಾ ಹಾಗೂ ಭಾರತದ ನಡುವೆ ವಿವಾದಕ್ಕೆ ಕಾರಣವಾಗಿದ್ದ ಡೋಕ್ಲಾಮ್ ಬಿಕ್ಕಟ್ಟು ಮತ್ತೆ ಪುನರಾವರ್ತೆನೆಯಾಗುವುದಿಲ್ಲ ಎಂದು ನಾನು ಭಾವಿಸಿದ್ದೇನೆ"
ನವದೆಹಲಿ: "ಚಿನಾ ಹಾಗೂ ಭಾರತದ ನಡುವೆ ವಿವಾದಕ್ಕೆ ಕಾರಣವಾಗಿದ್ದ ಡೋಕ್ಲಾಮ್ ಬಿಕ್ಕಟ್ಟು ಮತ್ತೆ ಪುನರಾವರ್ತೆನೆಯಾಗುವುದಿಲ್ಲ ಎಂದು ನಾನು ಭಾವಿಸಿದ್ದೇನೆ" ಬಾರತ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸಿಎನ್ಎನ್-ನ್ಯೂಸ್ 18 ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಮಾತನಾಡಿದ ಸಿತರಾಮನ್,"ವಿವಿಧ ಹಂತಗಳಲ್ಲಿ ಚೀನಾ ಜೊತೆ ಭಾರತವು ಒಪ್ಪಂದಗಳನ್ನು ಮಾಡಿಕೊಂಡಿದೆ. ಎರಡನೇ ಡೋಕ್ಲಾಮ್ ವಿವಾದ ಸಂಭವಿಸುವುದಿಲ್ಲ ಎನ್ನುವುದನ್ನು ನಾನು ನಿಸ್ಸಂಶಯವಾಗಿ ಹೇಳುತ್ತೇನೆ. ಆದರೆ ಈ ಕುರಿತಂತೆ ವಿವಿಧ ಹಂತಗಳಲ್ಲಿ ಮಾತುಕತೆಗಳು ನಡೆಯುತ್ತಿದೆ." ಎಂದಿದ್ದಾರೆ.
ನಾವು ಈ ಸಂಬಂಧದ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ, ಸುಮಾರು ಇಪ್ಪತ್ತು ಪ್ರತಿನಿಧಿ ಸಭೆಗಳಲ್ಲಿ ನಮ್ಮ ಶಾಶ್ವತ ಪ್ರತಿನಿಧಿಗಳಿದ್ದಾರೆ. ನಾವು ಗಡಿ ಅಧಿಕಾರಿಗಳೊಡನೆ ಸಭೆ ನಡೆಸಿದ್ದೇವೆ, ಧ್ವಜ ಸಭೆಗಳನ್ನು ಆಯೋಜಿಸುತ್ತಿದ್ದೇವೆ. ಇತ್ತೀಚೆಗೆ ಸೇನಾ ಮುಖ್ಯಸ್ಥರು ಸಹ ಇದೇ ಹೇಳಿಕೆಗಳನ್ನು ನೀಡಿದ್ದಾರೆ. ನಾವು ಚೀನಾದೊಡನೆ ಹಲವು ಹಂತದ ನಿರಂತರ ಮಾತುಕತೆಗಳಲ್ಲಿ ತೊಡಗಿದ್ದೇವೆ" ಸಚಿವರು ಹೇಳಿದ್ದಾರೆ.
ಕಳೆದ ವರ್ಷ ಡೋಕ್ಲಾಮ್ ವಿಚಾರವಾಗಿ ಭಾರತ ಹಾಗೂ ಚೀನಾ ಗಡಿಯಲ್ಲಿ ನಿರಂತರ 73 ದಿನಗಳ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
"ವಿವಿಧ ಹಂತದ ಮಾತುಕತೆಗಳ ಹೊರತಾಗಿಯೂ ಸೈನ್ಯವು ಸದಾ ಸನ್ನದ್ಧ ಸ್ಥಿತಿಯಲ್ಲಿರಬೇಕಾದದ್ದು ಅಗತ್ಯ ಎಂದು ಸಚಿವರು ಒತ್ತಿ ಹೇಳಿದರು. "ನಾವು ಶಾಂತವಾಗಿ ಸಂತೃಪ್ತರಾಗಿರಬೇಕೆಂದು ನಾನು ಹೇಳಲಾರೆ, ನಾವು ಗಡಿಯಲ್ಲಿ ಏನಾಗುತ್ತಿದೆ ಎನ್ನುವುದನ್ನು ಸದಾ ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಿರಬೇಕು" ಅವರು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ