ಪ್ರಮುಖ ಪಕ್ಷಗಳಿಂದ ತಪ್ಪಿತಸ್ಥರನ್ನು ನಿಷೇಧಿಸಲು ಸಾಧ್ಯವಿಲ್ಲ: 'ಸುಪ್ರೀಂ'ಗೆ ಕೇಂದ್ರ ಸರ್ಕಾರ

ಕ್ರಿಮಿನಲ್ ಚಾರಿತ್ರ್ಯವುಳ್ಳ ಜನರಿಗೆ ರಾಜಕೀಯ ಪಕ್ಷಗಳಿಂದ ನಿಷೇಧ ಹೇರಬೇಕೆಂದು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ಪಕ್ಷದೊಳಗಿನ ಕಚೇರಿಯ ಪದಾಧಿಕಾರಿಗಳನ್ನು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕ್ರಿಮಿನಲ್ ಚಾರಿತ್ರ್ಯವುಳ್ಳ ಜನರಿಗೆ ರಾಜಕೀಯ ಪಕ್ಷಗಳಿಂದ ನಿಷೇಧ ಹೇರಬೇಕೆಂದು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ಪಕ್ಷದೊಳಗಿನ ಕಚೇರಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು ಸ್ವಾಯತ್ತತೆಯ ಹಕ್ಕಿನ ಭಾಗವಾಗಿದೆ ಎಂದು ಗುರುವಾರ ಹೇಳಿದೆ. 
ವಕೀಲ ಅಶ್ವಿನ್ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, ಅರ್ಜಿಯಲ್ಲಿ ಕ್ರಿಮಿನಲ್ ಚಾರಿತ್ರ್ಯವುಳ್ಳ ಜನರಿಗೆ ರಾಜಕೀಯ ಪಕ್ಷಗಳಿಂದ ನಿಷೇಧ ಹೇರಬೇಕೆಂದು ತಿಳಿಸಿದ್ದಾರೆ. 
ಅರ್ಜಿ ಕುರಿತ ವಿಚಾರಣೆ ಮಾ.26 ರಂದು ನಡೆಯಲಿದ್ದು, ಅರ್ಜಿ ಕುರಿತಂತೆ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, ತಪ್ಪಿತಸ್ಥ ವ್ಯಕ್ತಿಗಳು ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. 
ಕೇಂದ್ರ ಚುನಾವಣಾ ಆಯೋಗಕ್ಕೆ ಒಂದು ರಾಜಕೀಯ ಪಕ್ಷದ ನೋಂದಣಿ ಕೇವಲ ಆಯ್ಕೆಯಾಗಿತ್ತು. ಸಂಘಟನೆ ಸ್ಥಾಪನೆ ಮಾಡುವ ಮೂಲಭೂತ ಹಕ್ಕನ್ನು ಸಂವಿಧಾನ ನಾಗರೀಕರಿಗೆ ನೀಡಿದೆ. ಈ ಹಕ್ಕನ್ನು ಯಾರಿಂದಲೂ ಕಿತ್ತುಕೊಳ್ಳಲು ಹಾಗೂ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ತಿಳಿಸಿದೆ. 
ಆರ್'ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಮೇವು ಹಗರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ರೀತಿಯ ಪ್ರತಿಕ್ರಿಯೆಯನ್ನು ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com