ಕೇಜ್ರಿವಾಲ್ ಹೆಸರಿನಲ್ಲಿ ಮಹಾ ಸುಳ್ಳುಗಾರ ಪ್ರಶಸ್ತಿ: ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ

ದೆಹಲಿ ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಕೇಜ್ರಿವಾಲ್ ಹೆಸರಿನಲ್ಲಿ ದೇಶದ ಮಹಾ ಸುಳ್ಳುಗಾರ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.
ಕೇಜ್ರಿವಾಲ್
ಕೇಜ್ರಿವಾಲ್
ನವದೆಹಲಿ: ದೆಹಲಿ ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಕೇಜ್ರಿವಾಲ್ ಹೆಸರಿನಲ್ಲಿ ದೇಶದ ಮಹಾ ಸುಳ್ಳುಗಾರ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. 
ದೊಡ್ದ ದೊಡ್ದ ಭರವಸೆಗಳನ್ನು ನೀಡುವ ಕೇಜ್ರಿವಾಲ್ ಅದನ್ನು ಈಡೇರಿಸುವುದಿಲ್ಲ ಎಂದು ಬಿಜೆಪಿ ಆರೋಪಿಸಿದ್ದು, ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ,  ಕೇಜ್ರಿವಾಲ್ ಹೆಸರಿನಲ್ಲಿ ಮಹಾ ಸುಳ್ಳುಗಾರ ಪ್ರಶಸ್ತಿಯನ್ನು ಸ್ಥಾಪನೆ ಮಾಡುತ್ತಿರುವುದಾಗಿ ಟ್ವಿಟರ್ ಮೂಲಕ ಘೋಷಿಸಿದ್ದಾರೆ. 
ಸಾರ್ವಜನಿಕರಿಗೂ ಪ್ರಶಸ್ತಿ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದ್ದು, ತಮ್ಮ ಸುಳ್ಳಿನ ಮಾಹಿತಿಯನ್ನು  9115929292 ವಾಟ್ಸ್ ಆಪ್ ನಂಬರ್ ಗೆ ಹೆಸರು ಮತ್ತು ವಿಳಾಸದ ಸಮೇತ ಕಳಿಸುವಂತೆ ಬಗ್ಗಾ ಕೇಳಿದ್ದಾರೆ. 
ಮಹಾಸುಳ್ಳುಗಾರ ಪ್ರಶಸ್ತಿಗೆ 5,100 ರೂಪಾಯಿ ನಗದು ಹಾಗೂ ಕೇಜ್ರಿವಾಲ್ ಪ್ರಶಸ್ತಿ ನೀಡಲಾಗುತ್ತದೆ. ಇದಕ್ಕೆ ದೆಹಲಿ ಮುಖ್ಯಮಂತ್ರಿಯೇ ಸ್ಪೂರ್ತಿ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com