

ನವದೆಹಲಿ : ಕೇಂದ್ರದಲ್ಲಿ ಲೋಕಾಪಾಲ್ , ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅಣ್ಣಾಹಜಾರೆ ಇಲ್ಲಿನ ರಾಮಲೀಲಾ ಮೈದಾನದಲ್ಲಿ ಕಳೆದ ನಾಲ್ಕು ದಿನಗಳಿಂದ ಹೋರಾಟ ನಡೆಸುತ್ತಿದ್ದು, ದೇಹದ ತೂಕದ ಪ್ರಮಾಣದಲ್ಲಿ ನಾಲ್ಕು ಕೆಜಿ ಕಡಿಮೆಯಾಗಿದೆ.
ಆದಾಗ್ಯೂ, ಅವರ ರಕ್ತದೊತ್ತಡ ಪ್ರಮಾಣ ಸಾಮಾನ್ಯವಾಗಿದೆ ಎಂದು ಅವರ ಆಪ್ತ ದತ್ತಾ ಅವಾರಿ ತಿಳಿಸಿದ್ದಾರೆ.
ಕೇಂದ್ರದಲ್ಲಿ ಲೋಕಾಪಾಲ ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಅಣ್ಣಾ ಹಜಾರೆ ಮಾರ್ಚ್ 23 ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಅಣ್ಣಾ ಹಜಾರೆ 2011ರಲ್ಲಿ ನಡೆಸಿದ ಹೋರಾಟದ ಪರಿಣಾಮ 2013ರಲ್ಲಿ ಲೋಕಾಪಾಲ್ ಮತ್ತು ಲೋಕಾಯುಕ್ತ ಕಾಯ್ದೆ ಅಂಗೀಕಾರವಾಗಿದೆ. ಆದರೆ, ಈವರೆಗೂ ಕೇಂದ್ರದಲ್ಲಿ ಒಂಬುಡ್ಸ್ ಮನ್ ನೇಮಕ ಆಗಿಲ್ಲ.
ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ನೀಡಬೇಕು. ಹಾಗೂ ಕೃಷಿಕರ ಸಮಸ್ಯೆ ಬಗೆಹರಿಸಬೇಕೆಂದು ಈ ಬಾರಿಯ ಅಣ್ಣಾ ಹಜಾರೆ ಅವರ ಬೇಡಿಕೆಯಾಗಿದೆ.