ಪತಂಜಲಿ ಅಟ್ಟಾ ಬ್ಲಾಗ್ ತೆಗೆದು ಹಾಕಿ: ಗೂಗಲ್, ಫೇಸ್ ಬುಕ್ ಗೆ ದೆಹಲಿ ಹೈಕೋರ್ಟ್ ನಿರ್ದೇಶನ

ಬಾಬಾ ರಾಮ್ ದೇವ್ ಪತಂಜಲಿ ಆಯುರ್ವೇದ ಅಟ್ಟಾದ ಕುರಿತಂತೆ ಸಾಮಾಜಿಕ ತಾಣಗಳಾದ ಫೇಸ್ ಬುಕ್, ಗೂಗಲ್, ಯೂಟ್ಯೂಬ್ ಗಳಲ್ಲಿ ಪ್ರಸಾರವಾಗುತ್ತಿರುವ..............
ಬಾಬಾ ರಾಮ್ ದೇವ್
ಬಾಬಾ ರಾಮ್ ದೇವ್
Updated on: 
ನವದೆಹಲಿ: ಬಾಬಾ ರಾಮ್ ದೇವ್ ಪತಂಜಲಿ ಆಯುರ್ವೇದ ಅಟ್ಟಾದ ಕುರಿತಂತೆ ಸಾಮಾಜಿಕ ತಾಣಗಳಾದ ಫೇಸ್ ಬುಕ್, ಗೂಗಲ್, ಯೂಟ್ಯೂಬ್ ಗಳಲ್ಲಿ ಪ್ರಸಾರವಾಗುತ್ತಿರುವ ವೀಡಿಯೋ ತುಣುಕನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಸಾಮಾಜಿಕ ತಾಣ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
ನ್ಯಾಯಾಧೀಶರಾದ ರಾಜೀವ್ ಸಹಾ ಈ ಮಧ್ಯಂತರ ಆದೇಶವನ್ನು ನೀಡಿದ್ದಾರೆ. ಎಲ್ಲಾ ಮೂರು ಸಾಮಾಜಿಕ ತಾಣಗಳು ಈ ಕೂಡಲೇ ಬ್ಲಾಗ್ ವೀಡಿಯೋ ಲಿಂಕ್ ಗಳನ್ನು, ತಮ್ಮ ಸೈಟ್ ಗಳಿಂದ ತೆಗೆದುಹಾಕಬೇಕೆಂದು ಅವರು ಆದೇಶಿಸಿದ್ದಾರೆ.
ಇದೇ ವೇಳೆ ಆ ಬ್ಲಾಗ್ ಹಾಗೂ ಯುಆರ್ ಎಲ್ ಗಳನ್ನು ನೊಂದಣಿ ಮಾಡಿದ್ದವರ ಹೆಸರುಗಳನ್ನು ಸಾಮಾಜಿಕ ತಾಣದ ನಿರ್ವಾಹಕರು ಬಹಿರಂಗಪಡಿಸಬೇಕೆಂದು ನ್ಯಾಯಾಲಯವು ನೋಟೀಸ್ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ.15ರಂದು ನಡೆಸಲಾಗುವುದೆಂದು ನ್ಯಾಯಾಲಯ ತಿಳಿಸಿದೆ.
ಐಟಿಸಿ ಸಂಸ್ಥೆಯ ಆಶೀರ್ವಾದ್ ಅಟ್ಟಾ ಹಾಗೂ ತಮ್ಮ ಬ್ರ್ಯಾಂಡ್ ನ ಅಟ್ಟಾ ತೋರಿಸಿ ತಮಿಳು ಭಾಷೆಯಲ್ಲಿ ವೀಡಿಯೋ ತುಣುಕು ಹಾಗೂ ಬ್ಲಾಗ್ ರಚಿಸಲಾಗಿದ್ದು ಇದು ನಮಗೆ ಅಸಮಾಧಾನ ತಂದಿದೆ, ಈ ತಕ್ಷಣ ಬ್ಲಾಗ್ ಲಿಂಕ್ ಗಳನ್ನು ತೆಗೆದುಹಾಕಬೇಕೆಂದು ಕೋರಿ ಪತಂಜಲಿ ಸಂಸ್ಥೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ವೀಡಿಯೋದಲ್ಲಿ ನಮ್ಮ ಹಾಗೂ ಐಟಿಸಿ ಬ್ರ್ಯಾಂಡ್ ಅಟ್ಟಾಗಳನ್ನು ರಬ್ಬರ್ ಎನ್ನಲಾಗಿದೆ ಎಂದು ಅರ್ಜಿಯಲ್ಲಿ ಪತಂಜಲಿ ಆರೋಪಿಸಿದೆ. 
ಇದೇ ವೀಡಿಯೋ ಪ್ರಕರಣ ಸಂಬಂಧ ಬೆಂಗಳೂರಿನ ನ್ಯಾಯಾಲಯದಿಂದ ಐಟಿಸಿ ಈಗಾಗಲೇ ಮಧ್ಯಂತರ ತಡೆ ಆದೇಶವನ್ನು ಪಡೆದಿದೆ ಎಂದು ಪತಂಜಲಿಯವರು ಹಿರಿಯ ವಕೀಲ ರಾಜೀವ್ ನಾಯರ್ ನ್ಯಾಯಾಲಯಕ್ಕೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com