ಚಿಪ್ಕೋ ಚಳುವಳಿಯ 45ನೇ ವಾಷಿಕೋತ್ಸವಕ್ಕೆ ಗೂಗಲ್​ ಡೂಡಲ್​ ಗೌರವ

ಚಿಪ್ಕೋ ಚಳುವಳಿಯ 45ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಖ್ಯಾತ ಸರ್ಚ್ ಎಂಜಿನ್ ಸಂಸ್ಥೆ ಗೂಗಲ್​ ವಿಶಿಷ್ಟವಾದ ಡೂಡಲ್ ರಚಿಸುವ​ ಮೂಲಕ ಕ್ರಾಂತಿಕಾರಿ ಚಳುವಳಿಯನ್ನು ನೆನಪಿಸಿಕೊಂಡಿದೆ.
ಗೂಗಲ್ ಡೂಡಲ್
ಗೂಗಲ್ ಡೂಡಲ್
ನವದೆಹಲಿ: ಚಿಪ್ಕೋ ಚಳುವಳಿಯ 45ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಖ್ಯಾತ ಸರ್ಚ್ ಎಂಜಿನ್ ಸಂಸ್ಥೆ ಗೂಗಲ್​ ವಿಶಿಷ್ಟವಾದ ಡೂಡಲ್ ರಚಿಸುವ​ ಮೂಲಕ ಕ್ರಾಂತಿಕಾರಿ ಚಳುವಳಿಯನ್ನು ನೆನಪಿಸಿಕೊಂಡಿದೆ.
ಅರಣ್ಯ ನಾಶದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಿಪ್ಕೋ ಚಳುವಳಿ ಕುರಿತಂತೆ ಗೂಗಲ್ ಡೂಡಲ್ ಬಿಡಿಸಿದ್ದು, ಹುಣ್ಣಿಮೆ ಬೆಳಕಿನಲ್ಲಿ ಮರವೊಂದನ್ನು ಕಡಿಯದಂತೆ ಗ್ರಾಮದ ಮಹಿಳೆಯರು ಮರದ ಸುತ್ತ ಮಾನವ ಸರಪಳಿ ನಿರ್ಮಿಸಿರುವ ಚಿತ್ರವನ್ನು ಬಿಡಿಸಲಾಗಿದೆ.
ಏನಿದು ಚಿಪ್ಕೋ ಚಳುವಳಿ?
ಅಣೆಕಟ್ಟು, ಕಾರ್ಖಾನೆಗಳು ಮತ್ತು ರಸ್ತೆಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶ ಮಾಡುತ್ತಿರುವುದನ್ನು ವಿರೋಧಿಸಿದ್ದ ಖ್ಯಾತ ಪರಿಸರ ಹೋರಾಟಗಾರ ಸುಂದರಲಾಲ್​ ಬಹುಗುಣ ಅವರ ನೇತೃತ್ದಲ್ಲಿ 1973ರಲ್ಲಿ ಉತ್ತರ ಪ್ರದೇಶದಲ್ಲಿ ಚಿಪ್ಕೋ ಚಳುವಳಿಯನ್ನು ಆರಂಭಿಸಲಾಯಿತು. ಈ ಚಳುವಳಿಯಲ್ಲಿ ಹೋರಾಟಗಾರರು ಪರಸ್ಪರರ ಕೈ ಹಿಡಿದು ಮರವನ್ನು ಅಪ್ಪಿ ನಿಲ್ಲುತ್ತಿದ್ದರು.  ಜತೆಗೆ 1730ರಲ್ಲಿ ರಾಜಸ್ಥಾನದಲ್ಲಿ ನಡೆದ ಚಳುವಳಿಯಿಂದ ಚಿಪ್ಕೋ ಚಳುವಳಿ ಪ್ರೇರಿತವಾಗಿತ್ತು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com