ಲ್ಯಾಂಡಿಂಗ್ ವೇಳೆ ಇಂಡಿಗೋ ವಿಮಾನದ ಚಕ್ರ ಸ್ಫೋಟ, ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರು

ಸಿಬ್ಬಂದಿ ಸೇರಿ 77 ಮಂದಿ ಪ್ರಯಾಣಿಕರಿದ್ದ ಇಂಡಿಗೋ ವಿಮಾನದ ಚಂಕ್ರ ಲ್ಯಾಂಡಿಂಗ್ ವೇಳೆ ಸ್ಫೋಟಗೊಂಡ ಘಟನೆ ಬುಧವಾರ ರಾತ್ರಿ ಹೈದರಬಾದ್ ನಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಹೈದರಾಬಾದ್: ಸಿಬ್ಬಂದಿ ಸೇರಿ 77 ಮಂದಿ ಪ್ರಯಾಣಿಕರಿದ್ದ ಇಂಡಿಗೋ ವಿಮಾನದ ಚಂಕ್ರ ಲ್ಯಾಂಡಿಂಗ್ ವೇಳೆ ಸ್ಫೋಟಗೊಂಡ ಘಟನೆ ಬುಧವಾರ ರಾತ್ರಿ ಹೈದರಬಾದ್ ನಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ನಡೆದಿರುವುದು ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ. ವಿಮಾನದಲ್ಲಿ ಒಂದು ನವಜಾತ ಮಗು ಸೇರಿದಂತೆ ಒಟ್ಟು 73 ಮಂದಿ ಪ್ರಯಾಣಿಕರು ಹಾಗೂ 4 ವಿಮಾನದ ಸಿಬ್ಬಂದಿಗಳು ಇದ್ದರು. ತಿರುಪತಿಯಿಂದ ಹೈದರಾಬಾದ್ ಗೆ ಆಗಮಿಸಿದ್ದ ಇಂಡಿಗೋ ವಿಮಾನ ಸಂಖ್ಯೆ 6ಇ 7117 ವಿಮಾನ ರನ್ ವೇ ಮೇಲೆ ಇಳಿಯುವ ವೇಳೆ ವಿಮಾನದ ಚಕ್ರ ಸ್ಫೋಟಗೊಂಡಿದೆ. 
ಕೂಡಲೇ ಎಚ್ಚೆತ್ತ ಪೈಲಟ್ ವಿಮಾನದ ವೇಗವನ್ನು ನಿಯಂತ್ರಿಸಿದ್ದು, ಇದರಿಂದ ಆಗಬಹುದಾಗಿದ್ದ ದೊಡ್ಡ ಪ್ರಮಾದವೊಂದು ತಪ್ಪಿದಂತಾಗಿದೆ. ವಿಮಾನ ನಿಲ್ಲುತ್ತಿದ್ದಂತೆಯೇ ವಿಮಾನ ನಿಲ್ದಾಣದ ಸಿಬ್ಬಂದಿ ವಿಮಾನದೊಳಗಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ತಂದಿದ್ದಾರೆ. ಬಳಿಕ ಇಲ್ಲಿನ ವಿಮಾನಗಳನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿದ್ದು, ರನ್ ವೇ ಯಿಂದ ವಿಮಾನವನ್ನು ತೆರವುಗೊಳಿಸಲಾಯಿತು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com