ಇತ್ತೀಚೆಗಷ್ಟೇ ಕಾಶ್ಮೀರಿ ಮಹಿಳೆ ಮೈಮೂನಾ ಮುಷ್ತಾಕ್ ಎಂಬುವವರು ಶ್ರೀನಗರದ ಪ್ರೆಸ್ ಎನ್ ಕ್ಲೇವ್ ಗೆ ಆಗಮಿಸಿ ಕಿಕ್ಕಿರಿದು ನೆರೆದಿದ್ದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಾ, ತಮ್ಮ ಮಗನಿಗೆ ಮನೆಗೆ ಮರಳುವಂತೆ ಕರೆ ನೀಡಿದ್ದರು. ಆಕೆಯ ಮಗ 19 ವರ್ಷದ ಫಹಾದ್ ಮುಷ್ತಾಕ್ ವಾಜಾ ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದ. ಆದರೆ, ಕಳೆದ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಆತನ ಫೋಟೊ ಅಪ್ ಲೋಡ್ ಆಗಿತ್ತು. ಫೋಟೊ ಜತೆ, 'ವಾಜಾ ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರ್ಪಡೆಗೊಂಡಿದ್ದಾನೆ' ಎಂಬ ಸಂದೇಶ ಬೇರೆ ಲಗತ್ತಿಸಲಾಗಿತ್ತು.