ಡೋಕ್ಲಾಮ್ ಸವಾಲು ಎದುರಿಸಲು ಟಿಬೆಟ್ ಬಳಿಯ ಚೀನಾ ಗಡಿಭಾಗದಲ್ಲಿ ಸೈನಿಕರ ನಿಯೋಜನೆ ಹೆಚ್ಚಿಸಿದ ಭಾರತ

ಚೀನಾದ ಗಡಿಭಾಗಕ್ಕೆ ಹೊಂದಿಕೊಂಡಿರುವ ದಿಬಾಂಗ್, ದಾವೂ ದೇಲಾಯ್, ಲೊಹಿತ್ ಕಣಿವೆ ಪ್ರದೇಶದಲ್ಲಿ ಭಾರತೀಯ ಸೈನಿಕರ ಸಂಖ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯೋಜಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅರುಣಾಚಲ ಪ್ರದೇಶ : ಭಾರತ ಹಾಗೂ ಚೀನಾ ನಡುವಿನ ದಶಕಗಳ ವಿವಾದವಾದ ಡೋಕ್ಲಾಮ್  ಸವಾಲು ಎದುರಿಸುವ ನಿಟ್ಟಿನಲ್ಲಿ ಟಿಬೆಟ್ ವಲಯದ ಚೀನಾದ ಗಡಿಭಾಗಕ್ಕೆ ಹೊಂದಿಕೊಂಡಿರುವ ದಿಬಾಂಗ್, ದಾವೂ ದೇಲಾಯ್, ಲೊಹಿತ್ ಕಣಿವೆ ಪ್ರದೇಶದಲ್ಲಿ ಭಾರತೀಯ ಸೈನಿಕರ ಸಂಖ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯೋಜಿಸಲಾಗಿದೆ.

ಟಿಬಿಟಿಯನ್ ವಲಯದ ಗಡಿಪ್ರದೇಶದಲ್ಲಿ ಚೀನಾದ ಚಲನವಲನಗಳ ಬಗ್ಗೆ ಹದ್ದಿನ ಕಣ್ಣೀಡಲಾಗಿದೆ. ಮತ್ತೆ ಮತ್ತೆ ಬಳಸುವಂತಾಗಲು ಹೆಲಿಕಾಪ್ಟರ್ ಗಳನ್ನು ನಿಯೋಜಿಸಿರುವುದಾಗಿ  ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

17 ಸಾವಿರ ಅಡಿ ಎತ್ತರದಲ್ಲಿರುವ ಕಣಿವೆ ಪ್ರದೇಶ  ಹಿಮದಿಂದ ಆವೃತ್ತವಾಗಿದ್ದು, ಅಲ್ಲಿ ಉಗ್ರರ ಚಲನವಲನಗಳ ಬಗ್ಗೆ ನಿಗಾ ಇಡಲಾಗಿದೆ. ಯಾವುದೇ ಸವಾಲು ಎದುರಾದರೂ ಅದನ್ನು ಹೆದರಿಸಲು ಸಿದ್ದವಿರುವುದಾಗಿ ಅವರು ಹೇಳಿದ್ದಾರೆ.

ವಿವಾದಿತ ಪ್ರದೇಶದಲ್ಲಿ ಚೈನಾ ಸೇನೆಯಿಂದ ರಸ್ತೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದರಿಂದ 73 ದಿನಗಳ ನಿಲುವಿನ ನಂತರ ಕಳೆದ ವರ್ಷದ ಜೂನ್ 16 ರಂದು ಭಾರತ ಮತ್ತು ಚೀನಾ ಸೈನಿಕರನ್ನು ಅಲ್ಲಿಂದ ಹಿಂತೆಗೆದುಕೊಂಡಿದ್ದವು.

 ಆದರೆ, ಚೀನಾ ಮತ್ತೆ ಭಾರತದ ಗಡಿ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಸೈನಿಕರ ಕ್ಷಿಪ್ರ ಕಾರ್ಯಾಚರಣೆಗಾಗಿ ರಸ್ತೆ ಸಂಪರ್ಕ ಭಾರತಕ್ಕೂ ಅಗತ್ಯವಾಗಿದೆ. ಅರುಣಾಚಲ ಪ್ರದೇಶದಲ್ಲಿ ದಿಬಾಂಗ್ -ಲೋಹಿತ್ ಕಣಿವೆ ಸಂಪರ್ಕಿಸುವ ಕಾರ್ಯ ಪೂರ್ಣಗೊಂಡಿದೆ ಎಂದು ಅವರು ಹೇಳಿದ್ದಾರೆ.

ಭಾರತದ ಗಡಿಗೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ಚೀನಾ 4 ಸಾವಿರ ಕಿಲೋ ಮೀಟರ್ ದೂರದ ಹೊಸ ರಸ್ತೆಯನ್ನು ನಿರ್ಮಿಸುತ್ತಿದೆ. ದೋಕ್ಲಾಮದಲ್ಲಿ ಚೀನಾದೇಶ ತನ್ನ ಸೈನಿಕರಿಗೆ ನೆರವಾಗುವ ನಿಟ್ಟಿನಲ್ಲಿ ಹೆಲಿಪ್ಯಾಡ್, ಸೆಂಟ್ರಿ ಪೋಸ್ಟ್ ನಿರ್ಮಿಸುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ತಿಂಗಳಲ್ಲಿ ಆರಂಭದಲ್ಲಿಯೇ ಹೇಳಿದ್ದರು.

ಉತ್ತರ ಡೋಕ್ಲಾಮ್ ನಲ್ಲಿ  ಸೈನಿಕರನ್ನು ಇಡುವ ದೃಷ್ಟಿಯಿಂದ ವಿವಾದಿತ ಪ್ರದೇಶದಲ್ಲಿ ಚೀನಾ ಮೂಲಸೌಕರ್ಯ ಕಾಮಗಾರಿ ಕೈಗೊಂಡಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಗಡಿಪ್ರದೇಶದಲ್ಲಿ ಪರಿಸ್ಥತಿ ಗಂಭೀರವಾಗಿದೆ. ಚೀನಾದೊಂದಿಗೆ ಪಾಕಿಸ್ತಾನವೂ ಮುಂಚೂಣಿಗೆ ಬರುತ್ತಿದ್ದು, ಭಾರತ ಗಡಿಪ್ರದೇಶದ ಬಗ್ಗೆ ಹೆಚ್ಚಿನ ನಿಗಾ ಇಡಬೇಕಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಜನವರಿ ತಿಂಗಳಲ್ಲಿ ತಿಳಿಸಿದ್ದರು.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com