ಸರ್ಕಾರದ ನಿರಾಸಕ್ತಿಯಿಂದಾಗಿ ಕರ್ನಾಟಕದ ರೈತರಿಗೆ 'ಫಸಲ್ ಭೀಮಾ ಯೋಜನೆ' ಲಾಭ ತಲುಪುತ್ತಿಲ್ಲ: ಪ್ರಧಾನಿ ಮೋದಿ

ಕರ್ನಾಟಕ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ನಿರಾಸಕ್ತಿಯಿಂದಾಗಿ, ಅಲ್ಲಿನ ರೈತರಿಗೆ ಕೇಂದ್ರದ ಫಸಲ್ ಭೀಮಾ ಯೋಜನೆಯಲ ಲಾಭಗಳು ತಲುಪುತ್ತಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ...
ನಮೋ ಆ್ಯಪ್ ಮೂಲಕ ಕರ್ನಾಟಕದ ರೈತರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ
ನಮೋ ಆ್ಯಪ್ ಮೂಲಕ ಕರ್ನಾಟಕದ ರೈತರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ
ನವದೆಹಲಿ; ಕರ್ನಾಟಕ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ನಿರಾಸಕ್ತಿಯಿಂದಾಗಿ, ಅಲ್ಲಿನ ರೈತರಿಗೆ ಕೇಂದ್ರದ ಫಸಲ್ ಭೀಮಾ ಯೋಜನೆಯಲ ಲಾಭಗಳು ತಲುಪುತ್ತಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ. 
ನಮೋ ಆ್ಯಪ್ ಮೂಲಕ ಕರ್ನಾಟಕದ ರೈತರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿಯವರು, ಕರ್ನಾಟಕ ಸರ್ಕಾರದ ನಿರಾಸಕ್ತಿಯಿಂದಿಗಿ, ರಾಜ್ಯದ ರೈತರಿಗೆ ಫಸಲ್ ಭೀಮಾ ಯೋಜನೆಯ ಲಾಭಗಳು ಸಿಗುತ್ತಿಲ್ಲ. ರೈತರ ಅಭಿವೃದ್ಧಿಗೆ ಕೆಲಸ ಮಾಡುವ ಸೂಕ್ಷ್ಮಯುತ ಸರ್ಕಾರ ಕರ್ನಾಟಕಕ್ಕೆ ಅಗತ್ಯವಿದೆ ಎಂದು ಹೇಳಿದ್ದಾರೆ. 
ಪ್ರಮುಖ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಲಾಗಿದ್ದು, ಕನಿಷ್ಠ ಬೆಂಬಲ ಬೆಲೆ (ಎಂಎಸ್'ಪಿ) ನೀಡಿ ಉತ್ಪಾದನಾ ವೆಚ್ಚದಲ್ಲಿ 1.5 ರಂತೆ ಬೆಂಬಲ ಬೆಲೆ ನೀಡಲಾಗುತ್ತದೆ. ರೈತ ನಾಯಕ ಬಿ.ಎಸ್.ಯಡಿಯೂರಪ್ಪ ರೈತರ ಆದಾಯ ದ್ವಿಗುಣಗೊಳಿಸಲು ಶ್ರಮಿಸುತ್ತಾರೆಂದು ವಿಶ್ವಾರ ವ್ಯಕ್ತಪಡಿಸಿದ್ದಾರೆ. 

2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಂಕಲ್ಪವನ್ನು ಮಾಡಿದ್ದೇನೆ. ಬೆಳ ಹಾನಿಗಳೊಗಾಗಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಲು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಸಫಲವಾಗಿದೆ. ಕರ್ನಾಟಕದ 14 ಲಕ್ಷ ರೈತರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಯೋಜನೆ ಹೆಚ್ಚಿನ ರೈತರಿಗೆ ತಲುಪಿಲ್ಲ. ಇದಕ್ಕೆ ರಾಜ್ಯ ಸರ್ಕಾರದ ನಿರಾಸಕ್ತಿಯೇ ಕಾರಣ ಎಂದಿದ್ದಾರೆ. 

ಕರ್ನಾಟಕದ ಸುಮಾರು 4 ಸಾವಿರ ಎಕರೆ ಭೂಮಿಯನ್ನು ನೀರಾವರಿಯಡಿಗೆ ತಂದಿದ್ದೇವೆ. ರಾಜ್ಯದ 1 ಕೋಟಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್'ನ್ನು ಒದಗಿಸಲಾಗಿದೆ. ನೀರಾವರಿಗೆ ಸಂಬಂಧಿಸಿದ ಸುಮಾರು 100 ಯೋಜನೆಗಳನ್ನು ನಾವು ಪುನರುಜ್ಜೀವನಗೊಳಿಸಿದ್ದೇನೆ. ರೂ.4 ಸಾವಿರ ಕೋಟಿ ವೆಚ್ಚದಲ್ಲಿ 5 ಬೃಹತ್ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ರೈತರ ಸಮೃದ್ಧಿಗೆ ಬಿಜೆಪಿ ಪ್ರಮುಖ ಆದ್ಯತೆಯನ್ನು ನೀಡುತ್ತದೆ. ಆದಕ್ಕಾಗಿಯೇ ಕಹಿಬೇವು ಲೇಪಿತ ಯೂರಿಯಾವನ್ನು ಕಡ್ಡಾಯಗೊಳಿಸಿದೆವು. ಇದರಿಂದ ರೈತರಿಗೆ ಸಾಕಷ್ಟು ಪ್ರಯೋಜನಗಳಾಗಿವೆ. ಯೂರಿಯಾದ ಕಾಳಸಂತೆಗೂ ಕಡಿವಾಣ ಹಾಕಿದೆ. 

ಕೇವಲ ಭಾಷಣಗಳಿಂದ ಮಾತ್ರ ರೈತರನ್ನು ಕಾಂಗ್ರೆಸ್ ನೆನೆಯುತ್ತದೆ. ಬರಗಾಲವಿದ್ದರೂ ನೀರಾವರಿಗಾಗಿ ಯೋಜನೆಗಳನ್ನು ಆರಂಭಿಸಿಲ್ಲ. ಮಳೆ ನೀರು ಸಂಗ್ರಹಕ್ಕೆ ಜನಾಂದೋಲನ ರೂಪಿಸಲಿಲ್ಲ. ಬತ್ತಿ ಹೋದ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಬದಲು ಬಿಲ್ಡರ್ ಗಳಿಗೆ ನೀಡಿದ್ದಾರೆ. ಕರ್ನಾಟಕ ಸರ್ಕಾರ ಸಂವೇದನಾ ರಹಿತವಾಗಿ ವರ್ತಿಸುತ್ತಿದೆ ಎಂದು ತಿಳಿಸಿದ್ದಾರೆ. 

ಬಿಜೆಪಿ ಜಾರಿಗೆ ತಂದಿರುವ ಪ್ರಧಾನಮಂತ್ರಿ ಕಿಸಾನ್ ಸಂಪದ ಯೋಜನೆಯಿಂದಾಗಿ ವ್ಯಾಲ್ಯೂ ಅಡಿಷನ್'ಗೆ ಸಹಾಯಕವಾಗಲಿದೆ. ಬೆಳೆಗಳ ಸಂಗ್ರಹಕ್ಕೆ ಗೋದಾಮು ನಿರ್ಮಾಣಕ್ಕೂ ಸಹಾಯವಾಗುತ್ತಿದೆ. ಆಪರೇಷನ್ ಗ್ರೀನ್ ರೆವಲ್ಯೂಷನ್ ಆರಂಭ ಮಾಡಿದ್ದೇವೆ. ಕೃಷಿ ತ್ಯಾಜ್ಯದಿಂದಲೂ ಆದಾಯಗಳಿಸುವ ಸಲುವಾಗಿ ಗೋಬರ್ ಧನ್ ಯೋಜನೆಯನ್ನೂ ಜಾರಿಗೆ ತಂದಿದ್ದೇವೆ. ಗ್ರಾಮೀಣ ಸ್ವಚ್ಛವಾಗುತ್ತದೆ, ರೈತರಿಗೂ ನೆರವಾಗುತ್ತದೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಅವರು ಹೇಳಿರುವಂತೆಯೇ ಪ್ರತೀ ಕೈಗಳಿಗೂ ಕೆಲಸ, ಪ್ರತೀ ಹೊಲಕ್ಕೂ ನೀರು ನಮ್ಮ ಧ್ಯೇಯವಾಗಿದೆ. ನಾವು ಬಿಳಿಕ್ರಾಂತಿ, ನೀಲಿಕ್ರಾಂತಿ, ಹಸಿರು ಕ್ರಾಂತಿ ಹಾಗೂ ನೀರು ಕ್ರಾಂತಿಗಳ ಜೊತೆ ಜೊತೆಗೆ ಸಾವಯವ ಕ್ರಾಂತಿಯನ್ನೂ ಮಾಡಬೇಕಿದೆ ಎಂದ ಮೋದಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com