ಕಾಶ್ಮೀರದಲ್ಲಿ ಚೆನ್ನೈ ಪ್ರವಾಸಿಗನ ಸಾವು: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಖಂಡನೆ

ಕಾಶ್ಮೀರದಲ್ಲಿ ನಡೆದ ಕಲ್ಲುತೂರಾಟದಲ್ಲಿ ಚೆನ್ನೈ ಪ್ರವಾಸಿಗ ಸಾವನ್ನಪ್ಪಿದ ಪ್ರಕರಣವನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತೀವ್ರವಾಗಿ ಖಂಡಿಸಿದ್ದಾರೆ...
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
Updated on: 
ನವದೆಹಲಿ: ಕಾಶ್ಮೀರದಲ್ಲಿ ನಡೆದ ಕಲ್ಲುತೂರಾಟದಲ್ಲಿ ಚೆನ್ನೈ ಪ್ರವಾಸಿಗ ಸಾವನ್ನಪ್ಪಿದ ಪ್ರಕರಣವನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತೀವ್ರವಾಗಿ ಖಂಡಿಸಿದ್ದಾರೆ. 
ರಾಜಧಾನಿ ದೆಹಲಿ ಸೇನಾ ಭವನದಲ್ಲಿ ನಡೆದ ನೌಕಾಪಡೆ ಕಮಾಂಡರ್ ಗಳ ಸಮಾವೇಶದಲ್ಲಿ ಮಾತನಾಡಿರುವಅವರು, ಪ್ರವಾಸಿಗರಿಗೆ ಸುರಕ್ಷಿತೆಯನ್ನು ನೀಡಬೇಕು. ಕಲ್ಲು ತೂರಾಟದಲ್ಲಿ ಚೆನ್ನೈ ಪ್ರವಾಸಿಗನ ಸಾವು ದುರಾದೃಷ್ಟಕರ ಹಾಗೂ ಖಂಡನೀಯ ಎಂದು ಹೇಳಿದ್ದಾರೆ. 
ಸೇನಾಪಡೆಗಳು ಉಗ್ರರ ವಿರುದ್ಧ ಹೋರಾಟ ನಡೆಸುತ್ತಿದ್ದು, ಘಟನೆಗೆ ಅವರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ಪ್ರವಾಸಿಗರನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳುತ್ತಾರೆ. ಕಾಶ್ಮೀರದಲ್ಲಿ ಈ ರೀತಿಯ ಕಲ್ಲು ತೂರಾಟ ಘಟನೆಗಳು ಸಂಭವಿಸಿ, ಪ್ರವಾಸಿಗರಿಗೆ ಗಾಯವಾಗುವುದು, ಹಾಗೂ ಸಾವನ್ನಪ್ಪುತ್ತಿದ್ದರೆ, ಪ್ರವಾಸಿಗರು ಬರಬೇಕೆಂಬ ಮುಖ್ಯಮಂತ್ರಿಗಳ ಹೇಳಿಕೆ ಸರಿಯಾಗಿರುವುದಿಲ್ಲ. ಪ್ರಸ್ತತ ನಡೆದಿರುವ ಘಟನೆ ದುರಾದೃಷ್ಟಕರವಾದದ್ದು. ಉದ್ದೇಶಪೂರ್ವಕವೋ ಅಥವಾ ಉದ್ದೇಶಪೂರಿತವಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಆದರೆ, ಘಟನೆ ನಿಜಕ್ಕೂ ಖಂಡನೀಯ ಎಂದು ತಿಳಿಸಿದ್ದಾರೆ. 
ಕಾಶ್ಮೀರದ ನರಬಲ್ ಎಂಬ ಪ್ರದೇಶದಲ್ಲ ಭದ್ರತಾ ಸಿಬ್ಬಂದಿಗಳು ಹಾಗೂ ಸ್ಥಳೀಯರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ವೇಳೆ ಪ್ರತಿಭಟನಾಕಾರರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದರು.
ಚೆನ್ನೈ ಮೂಲದ ಆರ್.ತಿರುಮಣಿ ಎಂಬುವವರು ಕುಟುಂಬ ಸದಸ್ಯರೊಂದಿಗೆ ವಾಹನದಲ್ಲಿ ತೆರಳುತ್ತಿದ್ದರು. ಶ್ರೀನಗರದಿಂದ ಕಾಶ್ಮೀರದ ಗುಲ್ಮಾರ್ಗ್ ಬಳಿಯಿರುವ ರೆಸಾರ್ಟ್'ಗೆ ವಾಹನ ತೆರಳುತ್ತಿತ್ತು. ಕಲ್ಲು ತೂರಾಟದ ನಡೆಯುತ್ತಿದ್ದ ಸಂದರ್ಭದಲ್ಲಿ ತಿರುಮಣಿಯವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಶ್ರೀನಗರದ ಆಸ್ಪತ್ರೆಗೆ ಸೋಮವಾರ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ತಿರುಮಣಿಯವರು ಸಾವನ್ನಪ್ಪಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com