ಮಹಮದ್ ಅಲಿ ಜಿನ್ನಾ ಮಹಾಪುರುಷ: ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಪುಲೆ

ಪಾಕಿಸ್ತಾನ ಸ್ಥಾಪಕ ಮೊಹಮ್ಮದ್‌ ಅಲಿ ಜಿನ್ನ ಮಹಾಪುರುಷ ಎಂದು ಉತ್ತರ ಪ್ರದೇಶದ ಬಿಜೆಪಿ ಲೋಕಸಭಾ ಸದಸ್ಯೆ ಸಾವಿತ್ರಿ ಬಾಯಿ ಪುಲೆ ಹೇಳಿದ್ದಾರೆ....
ಸಾವಿತ್ರಿ ಬಾಯಿ ಪುಲೆ
ಸಾವಿತ್ರಿ ಬಾಯಿ ಪುಲೆ
Updated on
ಬಹ್ರಿಚ್:  ಪಾಕಿಸ್ತಾನ ಸ್ಥಾಪಕ ಮೊಹಮ್ಮದ್‌ ಅಲಿ ಜಿನ್ನ ಮಹಾಪುರುಷ ಎಂದು  ಉತ್ತರ ಪ್ರದೇಶದ ಬಿಜೆಪಿ ಲೋಕಸಭಾ ಸದಸ್ಯೆ ಸಾವಿತ್ರಿ ಬಾಯಿ ಪುಲೆ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಮೊಹಮ್ಮದ್‌ ಅಲಿ ಜಿನ್ನ ಪಾಕಿಸ್ತಾನದ ಸ್ವಾತಂತ್ರ್ಯ ತಂದು ಕೊಟ್ಟವರು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಅವರು ಕೊಡುಗೆ ನೀಡಿದ್ದಾರೆ. ಅವರು ಓರ್ವ ಮಹಾಪುರಷನಿದ್ದಂತೆ. ಅಷ್ಟು ಮಾತ್ರ ಅಲ್ಲ, ಅವರು ಎಂದೆಂದೂ ಮಹಾಪುರುಷರಾಗಿಯೇ ಉಳಿದುಕೊಳ್ಳುತ್ತಾರೆ. ಎಂದು ಹೇಳಿದ್ದಾರೆ.
ಅಲಿಗರ್‌ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಜಿನ್ನಾ ವಿರುದ್ಧ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಮಾಧ್ಯಮದ ಜತೆ ಸಾವಿತ್ರಿ ಬಾಯಿ ಪುಲೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಾವಿತ್ರಿ ಬಾಯಿ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
ಇತ್ತೀಚೆಗೆ ತಮ್ಮದೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಸಾವಿತ್ರಿ ಬಾಯಿ ಪುಲೆ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com