ಭಾರೀ ಬಿರುಗಾಳಿ, ಗುಡುಗು, ಸಿಡಿಲಿಗೆ ಆಂಧ್ರ, ಉತ್ತರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಒಟ್ಟು 41 ಸಾವು

ಚಂಡಮಾರುತ, ಸಿಡಿಲು ಬಡಿದು ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಒಟ್ಟು 30 ಜನರು ಮೃತಪಟ್ಟಿದ್ದಾರೆ.
ಚಂಡಮಾರುತ, ಮಳೆಯ ಆರ್ಭಟಕ್ಕೆ ಒಟ್ಟು 30 ಸಾವು: ಆಂಧ್ರ, ಉತ್ತರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಜೀವ ಹಾನಿ
ಚಂಡಮಾರುತ, ಮಳೆಯ ಆರ್ಭಟಕ್ಕೆ ಒಟ್ಟು 30 ಸಾವು: ಆಂಧ್ರ, ಉತ್ತರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಜೀವ ಹಾನಿ
ನವದೆಹಲಿ: ಧೂಳು ಸಹಿತ ಬಿರುಗಾಳಿ, ಗುಡುಗು, ಸಿಡಿಲಿಗೆ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಹಾಗೂ ದೆಹಲಿಯಲ್ಲಿ ಒಟ್ಟು 41 ಜನರು ಬಲಿಯಾಗಿದ್ದಾರೆ. 
ಉತ್ತರ ಪ್ರದೇಶವೊಂದರಲ್ಲೇ 18 ಜನರು ಮೃತಪಟ್ಟಿದ್ದು 4 ಮಕ್ಕಳೂ ಸೇರಿದಂತೆ ಒಟ್ಟು 12 ಜನರು ಪಶ್ಚಿಮ ಬಂಗಾಳದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದಾರೆ. ಮೃತರ ಕುಟುಂಬಕ್ಕೆ ನೆರವು ನೀಡುವುದರ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ. ಇನ್ನು ನೆರೆ ರಾಜ್ಯ ಆಂಧ್ರದಲ್ಲಿಯೂ ಪ್ರಕೃತಿ ವಿಕೋಪಕ್ಕೆ ಸಾವು ನೋವುಗಳು ಸಂಭವಿಸಿದ್ದು ಒಟ್ಟು 9 ಜನರು ಅಸುನೀಗಿದ್ದಾರೆ. 
ಹವಾಮಾನ ಇಲಾಖೆಯ ಮಾಹಿತಿ ಹಿಮಾಚಲ ಪ್ರದೇಶ, ಉತ್ತರಾಖಂಡ್, ಪಂಜಾಬ್, ಹರ್ಯಾಣ, ಚಂಡೀಗಢ, ಮಧ್ಯಪ್ರದೆಶ, ಜಾರ್ಖಂಡ್, ಅಸ್ಸಾಮ್, ಮೇಘಾಲಯ, ಮಹಾರಾಷ್ಟ್ರ, ಕರ್ನಾಟಕ, ಕೇರಳ ತಮಿಳುನಾಡಿನ ಕೆಲವು ಭಾಗಗಳಿಯೂ ಗುಡುಗು, ಸಿಡಿಲು ಕಾಣಿಸಿಕೊಳ್ಳಲಿದೆ.  ಸಿಡಿಲಿಗೆ ಪ್ರಾಣ ಹಾನಿ ಸಂಭವಿಸಿರುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು "ಸಿಡಿಲಿನಿಂದ ಉಂಟಾದ ಪ್ರಾಣ ಹಾನಿ ಬಗ್ಗೆ ನೋವುಂಟಾಗಿದೆ, ಗಾಯಗೊಂಡವರು ಶೀಘ್ರವೇ ಗುಣಮುಖರಾಗಲು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. 
ಇದೇ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ಟ್ವೀಟ್ ಮಾಡಿದ್ದು ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ನೆರವು ನೀಡುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.  ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ್, ತೆಲಂಗಾಣ, ಪಂಜಾಬ್ ನಲ್ಲಿ ಉಂಟಾಗಿದ್ದ ಚಂಡಮಾರುತದ ಬೆನ್ನಲ್ಲೆ ಮತ್ತೊಮ್ಮೆ ಪ್ರಕೃತಿ ವಿಕೋಪ ಸಂಭವಿಸಿದೆ.    

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com