
ನವದೆಹಲಿ: ಕಾರ್ಮಿಕರ ಪಡೆಗೆ ಸೇರುವುದೆಂದರೆ ಉದ್ಯೋಗಿಗಳಾಗಿರಲಿ ಅಥವಾ ನಿರುದ್ಯೋಗಿಗಳಾಗಿರಲಿ ಅದು ಮುಖ್ಯವಲ್ಲ, ಬದಲಿಗೆ ಕೆಲಸಕ್ಕಾಗಿ ಕಾಯುತ್ತಿರುವವರು ಎಂದರ್ಥ ಕೂಡ ಆಗುತ್ತದೆ. 2015ರಲ್ಲಿ ಭಾರತದ ಕಾರ್ಮಿಕಪಡೆಯ ಸಂಖ್ಯೆ ಕೇವಲ 40.60ಲಕ್ಷ ಕ್ಕಿಂತ ಕಡಿಮೆಯಿತ್ತು.
ಕೆಲಸಕ್ಕಾಗಿ ಇದುರು ನೋಡುತ್ತಿರುವ ಉದ್ಯೋಗಿ ಮತ್ತು ನಿರುದ್ಯೋಗಿಗಳ ಒಟ್ಟು ಸಂಖ್ಯೆಯನ್ನು 15 ವರ್ಷಗಳಲ್ಲಿ ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ಬರುವ ಸಂಖ್ಯೆಯನ್ನು ನೌಕರಪಡೆಯ ಪಾಲ್ಗೊಳ್ಳುವಿಕೆ ಸಂಖ್ಯೆ ಎನ್ನಲಾಗುತ್ತದೆ.
2015ರಲ್ಲಿ ಒಟ್ಟು ಕಾರ್ಮಿಕಪಡೆ ಸಂಖ್ಯೆ ಶೇಕಡಾ 50.3ರಷ್ಟಿತ್ತು ಎಂದು 2015ರ ಕಾರ್ಮಿಕ ವಿಭಾಗದ ಉದ್ಯೋಗ-ನಿರುದ್ಯೋಗ ಸಮೀಕ್ಷೆಯಿಂದ ತಿಳಿದುಬಂದಿದೆ. 2014ರಲ್ಲಿ ಇದರ ಪ್ರಮಾಣ ಶೇಕಡಾ 52.5ರಷ್ಟಿತ್ತು.
15 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಪ್ರತಿ ಇಬ್ಬರು ಭಾರತೀಯರಲ್ಲಿ ಒಬ್ಬರು ಉದ್ಯೋಗಿಗಳಾಗಿರುತ್ತಾರೆ ಅಥವಾ ಕೆಲಸಕ್ಕಾಗಿ ಇದಿರು ನೋಡುತ್ತಾರೆ. 2015ರಲ್ಲಿ ಶೇಕಡಾ 23.7ರಷ್ಟಿದ್ದು, ಮಹಿಳಾ ಕಾರ್ಮಿಕರ ಸಂಖ್ಯೆ ಇನ್ನೂ ಕಡಿಮೆಯಾಗಿದೆ. ಇದು ಕಳೆದೊಂದು ದಶಕದಲ್ಲಿ ಕಡಿಮೆಯಾಗುತ್ತದೆ.
2001ರಿಂದ 2005ರವರೆಗೆ ಸರಾಸರಿ ಸುಮಾರು 12 ದಶಲಕ್ಷ ಜನರು ಪ್ರತಿವರ್ಷ ಕಾರ್ಮಿಕ ಪಡೆಯನ್ನು ಸೇರುತ್ತಾರೆ. ನಂತರ ಆ ವಾತಾವರಣವಿರಲಿಲ್ಲ. 2005ರಿಂದ 2010ರವರೆಗೆ ಕಾರ್ಮಿಕಪಡೆಗೆ ಸೇರಿದ ಜನರ ಸಂಖ್ಯೆ ಕಡಿಮೆಯಾಗಿದೆ. 2005ರಿಂದ 2015ರವರೆಗೆ 15ರಿಂದ 17 ವರ್ಷದೊಳಗಿನವರು ವರ್ಷದಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಮಿಕಪಡೆಗೆ ಸೇರುತ್ತಾರೆ.
ವಿಶ್ವ ಬ್ಯಾಂಕಿನ ವಿಶ್ವ ಅಭಿವೃದ್ಧಿ ಸೂಚ್ಯಂಕದಂತೆ 2015ರಲ್ಲಿ ಭಾರತದಲ್ಲಿ ಒಟ್ಟು ಕಾರ್ಮಿಕಪಡೆ 503.8 ದಶಲಕ್ಷದಷ್ಟಿತ್ತು. 2011ರಿಂದ 2016ರವರೆಗೆ ಭಾರತದಲ್ಲಿ ಸರಾಸರಿ ಪ್ರತಿವರ್ಷ 6.6 ದಶಲಕ್ಷ ಕಾರ್ಮಿಕಪಡೆ ಸೃಷ್ಟಿಯಾಗುತ್ತದೆ.
Advertisement