ದೆಹಲಿ ಮೆಟ್ರೋ ಹಳಿ ದಾಟುವಾಗ ಕೂದಲಳೆ ಅಂತರದಲ್ಲಿ ಪಾರಾದ ಯುವಕ!

ದೆಹಲಿಯ ಶಾಸ್ತ್ರಿನಗರದ ಮೆಟ್ರೋ ನಿಲ್ದಾಣದಲ್ಲಿ ಯುವಕನೊರ್ವ ಹಳಿ ದಾಟುವಾಗ ಕೂದಲೆಳೆ ಅಂತರದಲ್ಲಿ ಪಾರಾಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ದೆಹಲಿಯ ಶಾಸ್ತ್ರಿನಗರದ ಮೆಟ್ರೋ ನಿಲ್ದಾಣದಲ್ಲಿ ಯುವಕನೊರ್ವ ಹಳಿ ದಾಟುವಾಗ ಕೂದಲೆಳೆ ಅಂತರದಲ್ಲಿ ಪಾರಾಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. 
ಪವಾಡ ಸದೃಶ್ಯ ಪಾರಾಗಿರುವ ಯುವಕನನ್ನು 21 ವರ್ಷದ ಮಯೂರ್ ಪಟೇಲ್ ಎಂದು ಗುರುತಿಸಲಾಗಿದೆ. ಇನ್ನೇನು ಮೆಟ್ರೋ ರೈಲು ಹೊರಡುವಾಗ ಮಯೂರ್ ಹಳಿ ದಾಟಲು ಯತ್ನಿಸಿದ್ದಾನೆ. ಈ ವೇಳೆ ಕಾಲು ಜಾರಿ ಕೆಳಗೆ ಬೀಳಬೇಕು ಅಷ್ಟರಲ್ಲಿ ಇದನ್ನು ಕಂಡ ಮೆಟ್ರೋ ಚಾಲಕ ರೈಲು ನಿಲ್ಲಿಸಿದ್ದಾರೆ. 
ನಂತರ ಮಯೂರ್ ನನ್ನು ಮೆಟ್ರೋ ಸಿಬ್ಬಂದಿಗಳು ಪ್ರಶ್ನಿಸಿದಾಗ ತಾನು ಇದೇ ಮೊದಲ ಬಾರಿಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದು ಫ್ಲಾಟ್ ಫಾರ್ಮ್ ಗೆ ಹೇಗೆ ಹೋಗಬೇಕು ಎಂಬುದು ತಿಳಿದಿರಲಿಲ್ಲ ಗೊತ್ತಾಗಲಿಲ್ಲ ಎಂದು ಹೇಳಿದ್ದಾನೆ. 
ಇನ್ನು ಮೆಟ್ರೋ ರೈಲು ಚಾಲಕನ ಸಮಯಪ್ರಜ್ಞೆಗೆ ಟ್ವೀಟರಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಮಯೂರ್ ಅವರ ಪ್ರಾಣ ಕಾಪಾಡಿದ ಚಾಲಕನಿಗೆ ಶಬಾಸ್ ಎಂದು ಹೇಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com