ಪಿಎನ್ ಬಿ ವಂಚನೆ ಪ್ರಕರಣ ; ಜಾರಿ ನಿರ್ದೇಶನಾಲಯದಿಂದ ಮೊದಲ ಚಾರ್ಜ್ ಶೀಟ್ ದಾಖಲು

ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ಆಭರಣ ಉದ್ಯಮಿ ನೀರವ್ ಮೋದಿ 14 ಸಾವಿರ ಕೋಟಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇಂದು ಮೊದಲ ಚಾರ್ಜ್ ಶೀಟ್ ನ್ನು ದಾಖಲಿಸಿದೆ.
ನೀರವ್ ಮೋದಿ
ನೀರವ್ ಮೋದಿ
Updated on: 

ನವದೆಹಲಿ : ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ಆಭರಣ ಉದ್ಯಮಿ ನೀರವ್ ಮೋದಿ  14 ಸಾವಿರ ಕೋಟಿ ಹಣ ವರ್ಗಾವಣೆ  ಪ್ರಕರಣಕ್ಕೆ ಸಂಬಂಧಿಸಿದಂತೆ  ಜಾರಿ ನಿರ್ದೇಶನಾಲಯ  ಇಂದು ಮೊದಲ ಚಾರ್ಜ್ ಶೀಟ್ ನ್ನು  ದಾಖಲಿಸಿದೆ.

 ಸಾಲ ಮರುಪಾವತಿಸದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ನೀರವ್ ಮೋದಿಯ ಸುಮಾರು 171 ಕೋಟಿ ರೂ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಸೋಮವಾರ ಮುಟ್ಟುಗೋಲು ಹಾಕಿಕೊಂಡಿತ್ತು.

ಕಳೆದ ವಾರ ನೀರವ್ ಮೋದಿ ಸಂಬಂಧಿ, ಉದ್ಯಮಿ ಮೆಹೂಲ್ ಚೋಕ್ಸಿಗೆ ಸೇರಿದ ಗೀತಾಂಜಲಿ ಸಮೂಹ ಕಂಪನಿಯಿಂದ  85 ಕೋಟಿ ರೂಪಾಯಿ ಮೌಲ್ಯದ  34 ಸಾವಿರ ಚಿನ್ನಾಭರಣ ತುಣುಕುಗಳನ್ನು  ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿತ್ತು.

ಈ ಹಗರಣಕ್ಕೆ  ಸಂಬಂಧಿಸಿದಂತೆ  ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿರುವ ನೀರವ್ ಮೋದಿಯ ಒಟ್ಟಾರೇ ಆಸ್ತಿಯ ಪ್ರಸ್ತುತ ಮಾರುಕಟ್ಟೆ ದರ 7. 800 ಕೋಟಿ ರೂಪಾಯಿಗೂ ಹೆಚ್ಚಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಪ್ರಕರಣ ಸಂಬಂಧ ಸಿಬಿಐ ಮತ್ತಿತರ ಸಂಸ್ಥೆಗಳಿಂದಲೂ ತನಿಖೆ ನಡೆಯುತ್ತಿದೆ. ಈ ತಿಂಗಳ ಆರಂಭದಲ್ಲಿಯೇ ಸಿಬಿಐ  ಎರಡು ಜಾರ್ಜ್ ಶೀಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com