ಶ್ರೀಮಂತ ಯುವತಿ ಜೊತೆ ಪ್ರೇಮ ವಿವಾಹ: ಕೇರಳದಲ್ಲಿ ದಲಿತ ಕ್ರೈಸ್ತನ ಮರ್ಯಾದಹತ್ಯೆ?

ಶ್ರೀಮಂತ ವರ್ಗದ ಕ್ರೈಸ್ತ ಯುವತಿಯನ್ನು ಪ್ರೇಮ ವಿವಾಹವಾಗಿದ್ದ ದಲಿತ ಕ್ರೈಸ್ತ ಸಮುದಾಯದ ನವವಿವಾಹಿತನ ಮೃತದೇಹ ಪತ್ತೆಯಾಗಿದ್ದು ಇದು ಮರ್ಯಾದಹತ್ಯೆ ಎಂದು ಶಂಕಿಸಲಾಗಿದೆ...
ಮೃತ ಕೆವಿನ್
ಮೃತ ಕೆವಿನ್
Updated on
ಕೊಟ್ಟಾಯಂ: ಶ್ರೀಮಂತ ವರ್ಗದ ಕ್ರೈಸ್ತ ಯುವತಿಯನ್ನು ಪ್ರೇಮ ವಿವಾಹವಾಗಿದ್ದ ದಲಿತ ಕ್ರೈಸ್ತ ಸಮುದಾಯದ ನವವಿವಾಹಿತನ ಮೃತದೇಹ ಪತ್ತೆಯಾಗಿದ್ದು ಇದು ಮರ್ಯಾದಹತ್ಯೆ ಎಂದು ಶಂಕಿಸಲಾಗಿದೆ. 
ನಾಪತ್ತೆಯಾಗಿದ್ದ ನವವಿವಾಹಿತನನ್ನು ಮೌಂಟ್ ಮಾವೇಲಿಪ್ಪಡಿ ವಟ್ಟಪ್ಪಾರದ ಜೋಸೆಫ್ ಎಂಬುವರ ಪುತ್ರ 23 ವರ್ಷದ ಕೆವಿನ್ ಪಿ ಜೋಸೆಫ್ ಎಂದು ಗುರುತಿಸಲಾಗಿದೆ. ಕೆವಿನ್ ಕಳೆದ ಗುರುವಾರ ಕೊಲ್ಲಂ ತೇನ್ಮಲ ಒಟ್ಟಕಲ್ ಶಾನು ಭವನ್ ನಿವಾಸಿ 20 ವರ್ಷದ ನಿನೂ ಚಾಕೋ ಎಂಬ ಯುವತಿಯನ್ನು ಪ್ರೇಮ ವಿವಾಹವಾಗಿದ್ದರು. 
ಈ ಸಂಬಂಧ ಕೇರಳ ಪೊಲೀಸರು ಪ್ರಕರಣದ ತನಿಕೆ ಮುಂದುವರಿಸಿದ್ದಾರೆ. ಕಳೆದ ಭಾನುವಾರ ಬೆಳಗ್ಗೆ ಕೆವಿನ್ ಮತ್ತು ಆತನ ಸಂಬಂಧಿ ಅನೀಶ್ ಎಂಬುವರನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಕೆವಿನ್ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ಬಂದ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸಿದ್ದರು. 
ಈ ಮಧ್ಯೆ ಸೋಮವಾರ ಬೆಳಗ್ಗೆ 7 ಗಂಟೆಗೆ ಪುನಲೂರಿನಿಂದ 12 ಕಿಮೀ ದೂರದಲ್ಲಿ ಚಾಲಿಯಕ್ಕರ ಎಂಬಲ್ಲಿ ಕೆವಿನ್ ಮೃತದೇಹ ಪತ್ತೆಯಾಗಿತ್ತು. ಇನ್ನು ತನ್ನ ಪತಿ ಕೆವಿನ್ ನನ್ನು ತಮ್ಮ ಸಹೋದರ ಶಾನು ಸೇರಿದಂತೆ 10 ಮಂದಿ ಅಪಹರಿಸಿದ್ದಾರೆ ಎಂದು ನಿನೂ ಪೊಲೀಸರಿಗೆ ದೂರು ನೀಡಿದ್ದಳು. 
ಮದುವೆ ನಂತರ ನವದಂಪತಿ ಅನೀಶ್ ಮನೆಯಲ್ಲಿ ವಾಸವಾಗಿದ್ದರು. ಭಾನುವಾರ ಬೆಳಗ್ಗೆ ಅನೀಸ್ ಮನೆಗೆ ನುಗ್ಗಿದ 10 ಮಂದಿಯ ತಂಡವೊಂದು ಕೆವಿನ್ ಮತ್ತು ಅನೀಶ್ ನನ್ನು ಅಪಹರಿಸಿತ್ತು. ನಂತರ ಅನೀಶ್ ಮೇಲೆ ತೀವ್ರ ಹಲ್ಲೆ ನಡೆಸಿ ಮಧ್ಯ ದಾರಿಯಲ್ಲೇ ಆತನನ್ನು ಬಿಟ್ಟು ಹೋಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com