ಮಹಾತ್ಮಾ ಗಾಂಧಿ, ನೆಹರೂ ಇರಿಸಿದ್ದ ಜೈಲಿನಲ್ಲೇ ವಿಜಯ್ ಮಲ್ಯರನ್ನು ಇರಿಸುತ್ತೇವೆ!

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಜೈಲುಗಳ ವ್ಯವಹಾರದಲ್ಲಿ ಬ್ರಿಟನ್ ನ್ಯಾಯಾಲಯಗಳು ಮೂಗು ತೂರಿಸುವುದನ್ನು ತೀವ್ರ ವಿರೋಧ ವ್ಯಕ್ತಪಡಿಸಿದ್ದು...
ವಿಜಯ್ ಮಲ್ಯ
ವಿಜಯ್ ಮಲ್ಯ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಜೈಲುಗಳ ವ್ಯವಹಾರದಲ್ಲಿ ಬ್ರಿಟನ್ ನ್ಯಾಯಾಲಯಗಳು ಮೂಗು ತೂರಿಸುವುದನ್ನು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಈ ಸಂಬಂಧ ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರ ಎದುರು ನೇರಾನೇರ ವಿರೋಧಿಸಿರುವ ವಿಚಾರ ಇದೀಗ ಬಹಿರಂಗಗೊಂಡಿದೆ. 
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಭಾರತದ ಜೈಲುಗಳಲ್ಲಿ ವ್ಯವಸ್ಥೆ ಸರಿಯಾಗಿಲ್ಲ. ಅಲ್ಲಿ ನನಗೆ ಜೀವಭಯವಿದೆ. ಹೀಗಾಗಿ ನನ್ನನ್ನು ಗಡೀಪಾರು ಮಾಡಬೇಡಿ ಎಂದು ಲಂಡನ್ ಗೆ ಪರಾರಿಯಾಗಿರುವ ವಿಜಯ್ ಮಲ್ಯ ಲಂಡನ್ ನ್ಯಾಯಾಲಯಕ್ಕೆ ಕೋರಿದ್ದನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಈ ನುಡಿಗಳನ್ನು ಆಡಿದ್ದರು ಎಂದು ಹೇಳಿದ್ದಾರೆ. 
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಲಂಡನ್ ಗೆ ತೆರಳಿದ್ದರು. ಈ ವೇಳೆ ಬ್ರಿಟನ್ ನ್ಯಾಯಾಲಯಗಳು ಭಾರತದ ಜೈಲು ವ್ಯವಸ್ಥೆಯನ್ನು ಪ್ರಶ್ನಿಸುತ್ತಿವೆಯಂತಲ್ಲ ಎಂದು ಬ್ರಿಟನ್  ಪ್ರಧಾನಿ ತೆರೇಸಾ ಮೇ ಅವರನ್ನು ನೇರಾನೇರವಾಗಿ ಕೇಳಿದರು. ಅಲ್ಲದೆ ಇದೇ ಜೈಲುಗಳಲ್ಲಿ ನೀವೇ(ಬ್ರಿಟಿಷರು) ನಮ್ಮ ನಾಯಕರಾದ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ನೆಹರು ಅವರನ್ನು ಬಂಧಿಸಿ ಇಟ್ಟಿದ್ದಿರಿ. ಈ ಜೈಲುಗಳೇ ಇಂದು ಭಾರತದಲ್ಲಿ ಇವೆ ಎಂದು ಹೇಳಿದರು ಎಂದು ಸುಷ್ಮಾ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com