ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಈ ವರ್ಷ ದೇಶಾದ್ಯಂತ ಉತ್ತಮ ಮಳೆ ನಿರೀಕ್ಷೆ: ಹವಾಮಾನ ಇಲಾಖೆ

ಬೇಸಿಗೆ ಬರದಿಂದ ರೈತರು ತತ್ತರಿಸಿ ಹೋಗಿರುವಂತೆಯೇ ಇತ್ತ ಕೇಂದ್ರ ಹವಾಮಾನ ಇಲಾಖೆ ಈ ವರ್ಷ ದೇಶದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ನವದೆಹಲಿ: ಬೇಸಿಗೆ ಬರದಿಂದ ರೈತರು ತತ್ತರಿಸಿ ಹೋಗಿರುವಂತೆಯೇ ಇತ್ತ ಕೇಂದ್ರ ಹವಾಮಾನ ಇಲಾಖೆ ಈ ವರ್ಷ ದೇಶದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಅದರಂತೆ ಈ ವರ್ಷ ದೇಶದ್ಯಾಂತ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಈ ವರ್ಷದ ಜೂನ್ ತಿಂಗಳಿನಿಂದ ಸೆಪ್ಟಂಬರ್‌ವರೆಗೆ ಶೇ.96 ರಿಂದ ಶೇ.104ರಷ್ಟು ಮಳೆಯಾಗಲಿದೆ ಎಂದು ತಜ್ಞರು ಊಹಿಸಿದ್ದಾರೆ. ಇನ್ನು ಈ ಬಾರಿಯೂ ಸಾಮಾನ್ಯ ಮಳೆಯೇ ಆದರೂ ಈ ಹಿಂದಿನ ನಿರೀಕ್ಷೆಗಿಂತ ಶೇ.2ರಷ್ಟು ಮಳೆ ಪ್ರಮಾಣ ಜಾಸ್ತಿಯಾಗುವ ನಿರೀಕ್ಷೆ ಇದೆ. ಈ ಹಿಂದೆ ಶೇ.96ರಷ್ಚು ಮಳೆ ನಿರೀಕ್ಷಿಸಲಾಗಿತ್ತು, ಆದರೆ ನೂತನ ವರದಿಗಳ ಅನ್ವಯ ಈ ಬಾರಿ ಶೇ.98ರಷ್ಚು ಮಳೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೂನ್ಸೂನ್ ಮಾರುತಗಳಿಂದ ಶೇ.70ರಷ್ಚು ಮಳೆಯಾಗುವ ನಿರೀಕ್ಷೆ ಇದ್ದು, ದೇಶದಲ್ಲಿರುವ ಸುಮಾರು 206 ಮಿಲಿಯನ್ ರೈತರಿಗೆ ಈ ಬಾರಿಯ ಮಾನ್ಸೂನ್ ಮಳೆ ಕೈ ಹಿಡಿಯುವ ಸಾಧ್ಯತೆ ಇದೆ. ಪ್ರಮುಖವಾಗಿ ಅಕ್ಕಿ, ಜೋಳ, ಕಬ್ಬು, ಹತ್ತಿ ಮತ್ತು ಸೋಯಾಬಿನ್ ಬೆಳೆ ಬೆಳೆಯುವ ರೈತರು ನೀರಿಗಾಗಿ ಮಳೆಯನ್ನೇ ಆಶ್ರಯಿಸಿದ್ದಾರೆ. ಇನ್ನು 2 ದಿನಗಳ ಮುಂಚಿತವಾಗಿಯೇ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶ ಮಾಡುವ ನಿರೀಕ್ಷೆ ಇದ್ದು, ದೇಶಾದ್ಯಂತ ಈ ಬಾರಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ, '2017ರಲ್ಲಿ ಇಡೀ ಶೇ.96ಷ್ಟು ಮಳೆಯಾಗಿತ್ತು. ಈ ವರ್ಷ ಸರಾಸರಿ ಶೇ.96ರಷ್ಟು ಮಳೆಯಾಗಲಿದ್ದು, ಶೇ. ನಾಲ್ಕರಷ್ಟು ಏರಿಳಿತವಾಗಬಹುದು’ ಎಂದು ಹೇಳಿದೆ. ಇದೇ ವೇಳೆ ಆಗ್ನೇಯ ಭಾರತದಲ್ಲಿ ಸರಾಸರಿ ಶೇ.95ರಷ್ಟು, ಮಧ್ಯ ಭಾರತದಲ್ಲಿ ಶೇ.99, ದಕ್ಷಿಣ ಭಾರತದಲ್ಲಿ ಶೇ.95, ಈಶಾನ್ಯ ಭಾರತದಲ್ಲಿ ಶೇ.93ರಷ್ಟು ಮಳೆಯಾಗಲಿದೆ ಎಂದು ತಿಳಿದುಬಂದಿದ್ದು, ಜುಲೈ ತಿಂಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಈ ತಿಂಗಳ ಅವಧಿಯಲ್ಲಿ  ಶೇ.101ರಷ್ಟು ಮಳೆಯಾಗಬಹುದು. ಅಂತೆಯೇ ಆಗಸ್ಟ್ ನಲ್ಲಿ ಶೇ.94ರಷ್ಟು ಮಳೆಯಾಗುವ ಸಂಭವವಿದೆ ಎಂದು ಅಂದಾಜು ಮಾಡಲಾಗಿದೆ.
ಇನ್ನು ಶೇ.96ರಿಂದ ಶೇ.104ರಷ್ಟು ಮಳೆಯಾದರೆ ಮಳೆಗಾಲ ಎಂದು, ಶೇ.104ರಿಂದ ಶೇ.110 ರಷ್ಟು ಮಳೆಯಾದರೆ ಸಾಮಾನ್ಯಕ್ಕಿಂತ ಹೆಚ್ಚು ಎಂದು ಅಳತೆ ಮಾಡಲಾಗುತ್ತದೆ. 1951ರಿಂದ 2000ದವರೆಗೆ ಸರಾಸರಿ ಶೇ.89ರಷ್ಟು ಮಳೆಯಾಗಿದೆ. 2017ರಲ್ಲಿ ಶೇ.97ರಷ್ಟು ಮಳೆಯಾಗಿದ್ದು, ಆಗ್ನೇಯ ಭಾರತದಲ್ಲಿ ಶೇ. 95, ಮಧ್ಯ ಭಾರತದಲ್ಲಿ ಶೇ.106, ದಕ್ಷಿಣ ಭಾರತದಲ್ಲಿ ಶೇ. 92 ಮತ್ತು ಈಶಾನ್ಯ ಭಾರತದಲ್ಲಿ ಶೇ.89ರಷ್ಟು ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com