ಮಹಾಭಾರತದ ಕಾಲದಲ್ಲಿಯೇ ಪತ್ರಿಕೋದ್ಯಮ ಆರಂಭವಾಗಿತ್ತು: ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ

ಮಹಾಭಾರತದ ಕಾಲದಲ್ಲಿಯೇ ಪತ್ರಿಕೋದ್ಯಮ ಆರಂಭವಾಗಿತ್ತು ಎಂದು ಉತ್ತರಪ್ರದೇಶ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ಗುರುವಾರ ಹೇಳಿದ್ದಾರೆ...
ಉತ್ತರ ಪ್ರದೇಶ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ
ಉತ್ತರ ಪ್ರದೇಶ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ
ಮಥುರಾ; ಮಹಾಭಾರತದ ಕಾಲದಲ್ಲಿಯೇ ಪತ್ರಿಕೋದ್ಯಮ ಆರಂಭವಾಗಿತ್ತು ಎಂದು ಉತ್ತರಪ್ರದೇಶ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ಗುರುವಾರ ಹೇಳಿದ್ದಾರೆ. 
ಹಿಂದಿ ಪತ್ರಿಕೋದ್ಯಮ ದಿನಾಚರಣೆ ಹಿನ್ನಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಪತ್ರಿಕೋದ್ಯಮ ಮೂಲ ಕುರಿತ ವಿವಿಧ ಪ್ರತಿಪಾದನೆಗಳನ್ನು ತಿರಸ್ಕರಿಸಿರುವ ಅವರು, ಮಹಾಭಾರತದ ಕಾಲದಲ್ಲಿಯೇ ಪತ್ರಿಕೋದ್ಯಮ ಆರಂಭಗೊಂಡಿತ್ತು ಎಂದು ಹೇಳಿದ್ದಾರೆ. ಇದೇ ವೇಳೆ ಭಾರತದ ಹಲವಾರು ಮಹಾಕಾವ್ಯಗಳನ್ನು ಉಲ್ಲೇಖ ಮಾಡಿದ್ದಾರೆ. 
ಹಸ್ತಿನಾಪುರದಲ್ಲಿ ಕುಳಿತುಕೊಂಡೇ ದೃತರಾಷ್ಟ್ರನಿಗೆ ಸಂಜಯ ಕುರುಕ್ಷೇತ್ರ ಯುದ್ಧವನ್ನು ವಿವರಿಸುತ್ತ. ಇದು ನೇರಪ್ರಸಾರವಲ್ಲದೆ ಮತ್ತೇನು? ಎಂದು ಪ್ರಶ್ನಿಸಿದ್ದಾರೆ. 
ಇದಲ್ಲದೆ, ನಾರದರನ್ನು ಗೂಗಲ್ ಗೆ ಹೋಲಿದೆ ಮಾಡಿರುವ ಅವರು, ಗೂಗಲ್ ಈಗಷ್ಟೇ ಆರಂಭವಾಗಿದೆ. ಆದರೆ, ನಮ್ಮ ಗೂಗಲ್ ಬಹಳ ಹಿಂದೆಯೇ ಆರಂಭವಾಗಿತ್ತು. ನಾರದ ಮುನಿ ಮಾಹಿತಿಯ ಮೂರ್ತರೂಪವಾಗಿದ್ದರು. ಎಲ್ಲಿ, ಯಾವಾಗ ಬೇಕಾದರೂ ಹೋಗಿ ಮಾಹಿತಿ ನೀಡುತ್ತಿದ್ದು, ನಾರಾಯಣ ಎಂದು ಮೂರು ಬಾರಿ ಹೇಳುತ್ತಿದ್ದರು ಎಂದಿದ್ದಾರೆ. 
ಇದೇ ವೇಳೆ ಪತ್ರಿಕಾ ಸ್ವಾತಂತ್ರ್ಯವನ್ನು ಕೊಂಡಾಡಿರುವ ಅವರು, ಸುದ್ದಿಗಾರರ ಭದ್ರತೆ ಸರ್ಕಾರದ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com