ರಾಮಮಂದಿರ ಆದೇಶ ಮುಂದೂಡುವ ಮೂಲಕ ಸುಪ್ರೀಂಕೋರ್ಟ್ ಹಿಂದೂಗಳಿಗೆ ಅವಮಾನಿಸಿದೆ: ಆರ್'ಎಸ್ಎಸ್

ಅಯೋಧ್ಯೆ ರಾಮಮಂದಿರ ವಿವಾದ ಕುರಿತ ತೀರ್ಪನ್ನು ಮುಂದೂಡುವ ಮೂಲಕ ಸುಪ್ರೀಂಕೋರ್ಟ್ ಹಿಂದೂಗಳಿಗೆ ಅವಮಾನ ಮಾಡಿದೆ ಎಂದು ಆರ್'ಎಸ್ಎಸ್ ಶುಕ್ರವಾರ ಹೇಳಿದೆ...
ಆರ್'ಎಸ್ಎಸ್ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಶಿ
ಆರ್'ಎಸ್ಎಸ್ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಶಿ
ನವದೆಹಲಿ: ಅಯೋಧ್ಯೆ ರಾಮಮಂದಿರ ವಿವಾದ ಕುರಿತ ತೀರ್ಪನ್ನು ಮುಂದೂಡುವ ಮೂಲಕ ಸುಪ್ರೀಂಕೋರ್ಟ್ ಹಿಂದೂಗಳಿಗೆ ಅವಮಾನ ಮಾಡಿದೆ ಎಂದು ಆರ್'ಎಸ್ಎಸ್ ಶುಕ್ರವಾರ ಹೇಳಿದೆ. 
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಆರ್'ಎಸ್ಎಸ್ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಶಿಯವರು, ಹಿಂದು ಸುಮುದಾಯದ ಭಾವನೆಗಳನ್ನು ಪರಿಗಣಿಸಿ ಸುಪ್ರೀಂಕೋರ್ಟ್ ಆದಷ್ಟು ಬೇಗ ಆದೇಶವನ್ನು ನೀಡಲಿದೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ, ವಿಚಾರವನ್ನು ಮುಂದೂಡುವ ಮೂಲಕ ನ್ಯಾಯಾಲಯ ಹಿಂದೂಗಳಿಗೆ ಅವಮಾನಿಸಿದೆ ಎಂದು ಹೇಳಿದ್ದಾರೆ. 
ದೇವಾಲಯ ನಿರ್ಮಾಣಕ್ಕೆ ಕಾನೂನು ಅನುಮೋದನೆಯ ಅಗತ್ಯವಿದೆ. ನ್ಯಾಯಾಲಯದ ಆದೇಶಕ್ಕಾಗಿ ಹಲವು ವರ್ಷಗಳಿಂದಲೂ ಕಾಯುತ್ತಿದ್ದೇವೆ. ಅ.29ಕ್ಕೆ ಆದೇಶ ಹೊರಬೀಳುತ್ತದೆ ಎಂದು ತಿಳಿದಾಗ ಈ ಬಾರಿ ದೀಪಾವಳಿಗೆ ಹಿಂದೂಗಳಿಗೆ ಒಳ್ಳೆಯ ಸುದ್ದಿ ಬರುತ್ತದೆ ಎಂದುಕೊಂಡಿದ್ದೆವು. ಆದರೆ, ಸುಪ್ರೀಂಕೋರ್ಟ್ ಆದೇಶವನ್ನು ಮುಂದೂಡಿದೆ. ಅಲ್ಲದೆ, ತಮ್ಮ ಆದ್ಯತೆ ಬೇರೆಯ ವಿಚಾರಗಳಿಗಿವೆ ಎಂಬುದು ಆದೇಶದಲ್ಲಿ ತಿಳಿಯುತ್ತಿದೆ. ಹಿಂದೂ ಸಮುದಾಯದ ಭಾವನೆಗಳನ್ನು ಪರಿಗಣಿಸಿ ಸುಪ್ರೀಂಕೋರ್ಟ್ ರಾಮ ಜನ್ಮಭೂಮಿ ವಿಚಾರವನ್ನು ಆದಷ್ಟು ಬೇಗ ಇತ್ಯರ್ಥಪಡಿಸಬೇಕು. ಇಲ್ಲದೇ ಹೋದರೆ, ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com