ಟಿಪ್ಪು ಜಯಂತಿಯನ್ನು ಮಾಡುತ್ತೇವೆ ಎಂದು ಸರ್ಕಾರ ಸಷ್ಟಪಡಿಸಿದ ಬೆನ್ನಲ್ಲೇ ಶಾಸಕ ಸಿಟಿ ರವಿ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, 'ಟಿಪ್ಪು ಜಯಂತಿಯನ್ನು ಯಾಕೆ ಮಾಡುತ್ತಾರೆ? ಟಿಪ್ಪು ಇವರ ಅಪ್ಪಾನಾ, ತಾತನಾ, ಮುತ್ತಾತನಾ? ಎಂದು ಹೇಳುವ ಮೂಲಕ ಟಿಪ್ಪು ಜಯಂತಿ ಆಚರಣೆ ಕುರಿತು ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.