ವಾಯು ಮಾಲಿನ್ಯ ಹೆಚ್ಚಳ ಖಂಡಿಸಿ ಪರಿಸರ ಸಚಿವಾಲಯದ ಮುಂದೆ ಪ್ರತಿಭಟನೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿ ಮೀರುತ್ತಿರುವ ಮಾಲಿನ್ಯವನ್ನು ಖಂಡಿಸಿ ಜನರ ಗುಂಪೊಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿ ಮೀರುತ್ತಿರುವ ಮಾಲಿನ್ಯವನ್ನು ಖಂಡಿಸಿ ಜನರ ಗುಂಪೊಂದು ಪರಿಸರ ಸಚಿವಾಲಯದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ದೆಹಲಿ ವಾಯು ವಿಷವಾಗಿದೆ, ಉಸಿರಾಟವು ನನ್ನನ್ನು ಕೊಲ್ಲುತ್ತಿದೆ, # ಉಸಿರಾಟ ನನ್ನ ಹಕ್ಕು ಎಂಬ ಸಂದೇಶಗಳನ್ನು ಒಳಗೊಂಡ ಪೋಸ್ಟರ್ ಗಳನ್ನು ಹಿಡಿದು ಇಂದಿರಾ ಪರಿಯಾವರನ್ ಭವನದ ಮುಂದೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ ಸುತ್ತಮುತ್ತಲಿನ ರಾಜ್ಯಗಳಲ್ಲಿ ಈ ಕೂಡಲೇ ತ್ಯಾಜ್ಯ ಸುಡುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಳೆದ ಮೂರು ವಾರಗಳಿಂದ ದೆಹಲಿ ವಾಯು ಮಾಲಿನ್ಯ ಪ್ರಮಾಣ ಅಪಾಯದ ಮಟ್ಟ ತಲುಪಿದ್ದು, ಸೋಮವಾರ ಈ ವರ್ಷದಲ್ಲಿಯೇ ಅತಿ ಹೆಚ್ಚು ಮಾಲಿನ್ಯ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com