ಹೊಸೂರು ಮಾರ್ಯಾದಾ ಹತ್ಯೆ: ಯುವಕ ಧರಿಸಿದ ಟೀ- ಶರ್ಟ್ ನಿಂದ ಹಂತಕರ ಪತ್ತೆ!

ತಮಿಳುನಾಡಿನ ಹೊಸೂರಿನ ಅಂತರ್ ಜಾತಿ ದಂಪತಿಯ ಮಾರ್ಯಾದಾ ಹತ್ಯೆ ಪ್ರಕರಣದಲ್ಲಿ ಯುವಕ ಧರಿಸಿದ ಟೀ- ಶರ್ಟ್ ನಿಂದ ಹಂತಕರ ಜಾಡು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೃಷ್ಣಗಿರಿ:  ತಮಿಳುನಾಡಿನ ಹೊಸೂರಿನ ಅಂತರ್ ಜಾತಿ ದಂಪತಿಯ ಮಾರ್ಯಾದಾ ಹತ್ಯೆ  ಪ್ರಕರಣದಲ್ಲಿ ಯುವಕ ಧರಿಸಿದ ಟೀ- ಶರ್ಟ್ ನಿಂದ  ಹಂತಕರ ಜಾಡು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಯುವತಿಯ ಪೋಷಕರ ವಿರುದ್ಧವಾಗಿ  ಮದುವೆಯಾಗಿದ್ದ ಸೂದುಕುಂದಪಲ್ಲಿಯ ದಲಿತ ಯುವಕ ನಂದೀಶ್ (25) ಹಾಗೂ ಎಸ್ .ಸ್ವಾತಿಯ (25) ಮೃತದೇಹ  ಕರ್ನಾಟಕದ ಕಾವೇರಿ ನದಿಯಲ್ಲಿ ಪತ್ತೆಯಾಗಿತ್ತು.
 ನಂದೀಶ್ ಕಣ್ಮರೆಯಾಗಿರುವ ಬಗ್ಗೆ ನವೆಂಬರ್ 14 ರಂದು ನಂದೀಶ್ ಸಹೋದರ ಹೊಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಸ್ವಾತಿಯ ಅವರ ಸಂಬಂಧಿಕರನ್ನು ವಿಚಾರಣೆಗೊಳಪಡಿಸಿದರು.
ಈ ಮಧ್ಯೆ ಕರ್ನಾಟಕ ಪೊಲೀಸರು ಮಂಡ್ಯ ಜಿಲ್ಲೆ  ಶಿವನಸಮುದ್ರದ ಬಳಿ ಎರಡು ಮೃತದೇಹಗಳನ್ನು ಬೇರೆ ಬೇರೆ ದಿನ ಪತ್ತೆ ಹಚ್ಚಿದ್ದಾರೆ. ಯುವಕ ಧರಿಸಿದ ಟೀ ಶರ್ಟ್ ಮೇಲೆ ಅಂಬೇಡ್ಕರ್ ಭಾವಚಿತ್ರವಿತ್ತು.  ಜೈ ಭೀಮ್  ಘೋಷಣೆ ಯೊಂದಿಗೆ ಚೂದಗಣಪಲ್ಲಿ ಎಂಬ ಊರಿನ ಹೆಸರು ಕೂಡಾ ಬರೆಯಲಾಗಿತ್ತು. ಆತ ಆಂಧ್ರಪ್ರದೇಶ ಅಥವಾ ತಮಿಳುನಾಡಿಗೆ ಸೇರಿದವನಾಗಿರಬೇಕು ಎಂಬುದು ಪೊಲೀಸರ ಶಂಕೆಯಾಗಿತ್ತು.
ನವೆಂಬರ್ 15 ರಂದು ಕರ್ನಾಟಕ ಪೊಲೀಸರು ಹೊಸೂರಿಗೆ ಭೇಟಿ ನೀಡಿದ್ದು, ಮೃತದೇಹಗಳ ಪತ್ತೆಗಾಗಿ ಪೊಲೀಸರ ನೆರವು ಕೋರಿದ್ದಾರೆ. ನಂತರ ಹೊಸೂರು ಪೊಲೀಸರು ಸ್ವಾತಿ ಕುಟುಂಬ ಸದಸ್ಯರನ್ನು ಗುರುತು ಹಚ್ಚಿದ್ದಾರೆ. ಕೊಲೆಯಲ್ಲಿ ತಮ್ಮದೇನೂ ಪಾತ್ರ ಇಲ್ಲ ಎಂದು ಹೇಳುತ್ತಾರೆ. ಆದಾಗ್ಯೂ, ಹೆಚ್ಚಿನ ವಿಚಾರಣೆ ನಡೆಸಿದಾಗ ನಂದೀಶ್ ಮತ್ತು ಸ್ವಾತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ನವೆಂಬರ್ 10 ರಂದು ರಾತ್ರಿ ಹೊಸೂರಿನ ರಾಮ್ ನಗರದಲ್ಲಿ ನಟ ಕಮಲ್ ಹಾಸನ್  ಪ್ರಚಾರ ಕಾರ್ಯಕ್ರಮ ವಿದುದ್ದರಿಂದ ಅವರನ್ನು ನೋಡಲೆಂದು ದಂಪತಿಗಳು ಬಂದಿದ್ದಾರೆ. ಅಲ್ಲಿ ಅವರನ್ನು ನೋಡಿದ ಸ್ವಾತಿ ಸಂಬಂಧಿ ಕೃಷ್ಣ , ಸ್ವಾತಿ ತಂದೆ ಸೇರಿದಂತೆ ಕುಟುಂಬ ಸದಸ್ಯರನ್ನು ಕರೆಯಿಸಿ ಮದುವೆ ಮಾಡಿಸುವುದಾಗಿ ನಂಬಿಸಿದ್ದಾರೆ.
ನಂತರ ವಾಹನವೊಂದರಲ್ಲಿ ದಂಪತಿಯನ್ನು ಕೂರಿಸಿಕೊಂಡಿದ್ದು, ಕರ್ನಾಟಕ ಗಡಿಯತ್ತ ಕರೆದುಕೊಂಡು ಬಂದಿದ್ದಾರೆ. ಅನುಮಾನಗೊಂಡ ನಂದೀಶ್ ಪ್ರಶ್ನಿಸಿದಾಗ  ಸ್ವಾತಿ ಸಂಬಂಧಿಕರು ತೀವ್ರವಾಗಿ ಥಳಿಸಿದ್ದಾರೆ. ನಂತರ ಅವರಿಬ್ಬರ ಕೈ ಕಾಲು ಕಟ್ಟಿ ಹಾಕಿ ಕಾವೇರಿ ನದಿಗೆ ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಂದೀಶ್ ಹಾಗೂ ಸ್ವಾತಿ ಅಪಹರಿಸಲು ಬಳಸಿದ್ದ ವಾಹನವನ್ನು ಶನಿವಾರ ರಾತ್ರಿ ಪತ್ತೆ ಹಚ್ಚಿದ ಹೊಸೂರು ಪೊಲೀಸರು, ವಾಹನದ ಚಾಲಕ ಕೆ. ಸ್ವಾಮಿನಾಥನ್ ಎಂಬುವನನ್ನು ಬಂಧಿಸಿದ್ದಾರೆ. ನಂತರ ಸ್ವಾತಿ ತಂದೆ ಎಲ್. ಶ್ರೀನಿವಾಸನ್, ಆತನ ಸಹೋದರ ವೆಂಕಟೇಶ್ ಮತ್ತು ಸಂಬಂಧಿ ಎಂ, ಕೃಷ್ಣನ್ ಎಂಬುವರನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ನಾಲ್ವರ ಹುಡುಕಾಟ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com