ಪ್ರಸ್ತುತ ಅವ್ಯವಸ್ಥೆಯಿಂದ ಜಮ್ಮು - ಕಾಶ್ಮೀರ ರಕ್ಷಿಸಲು ಪಿಡಿಪಿಗೆ ಬೆಂಬಲ: ಒಮರ್ ಅಬ್ದುಲ್ಲಾ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರಸ್ತುತ ಅನಿಶ್ಚಿತತೆ ಹಾಗೂ ಅವ್ಯವಸ್ಥೆಯಿಂದ ರಾಜ್ಯವನ್ನು ರಕ್ಷಿಸಲು ಪಿಡಿಪಿ ಬೆಂಬಲ ನೀಡುತ್ತಿರುವುದಾಗಿ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಒಮಾರ್ ಅಬ್ದುಲ್ಲಾ
ಒಮಾರ್ ಅಬ್ದುಲ್ಲಾ
Updated on

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿನ  ಪ್ರಸ್ತುತ ಅನಿಶ್ಚಿತತೆ ಹಾಗೂ ಅವ್ಯವಸ್ಥೆಯಿಂದ ರಾಜ್ಯವನ್ನು ರಕ್ಷಿಸಲು ಪಿಡಿಪಿ ಬೆಂಬಲ ನೀಡುತ್ತಿರುವುದಾಗಿ ನ್ಯಾಷನಲ್ ಕಾನ್ಪರೆನ್ಸ್  ಪಕ್ಷದ ಮುಖಂಡ  ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ವಿಧಾನಸಭೆ ವಿಸರ್ಜಿಸಿದ ಒಂದು ದಿನದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ರಚನೆಗೆ  ಶಾಸಕರಿಗೆ ಹಣದ ಆಮಿಷವೊಡ್ಡಲಾಗುತ್ತಿದ್ದು,  ಕುದುರೆ ವ್ಯಾಪಾರದಂತಹ  ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಪಿಡಿಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವಂತೆ ಪಾಕಿಸ್ತಾನ ನಿರ್ದೇಶನ ನೀಡಿದೆ ಎಂದು ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ರಾಮ್ ಮಾಧವ್ ಸಾಕ್ಷ್ಯ ಒದಗಿಸಲಿ ಎಂದು ಒಮಾರ್  ಅಬ್ದುಲ್ಲಾ  ಸವಾಲು ಹಾಕಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com