ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆಗೆ ಪುಣೆಯಲ್ಲಿ ನಡೆದ ಸೇನಾ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿರುವ ಬಿಪಿನ್ ರಾವತ್ ಅವರು, ಶಾಂತಿ ಮಾತುಕತೆಗೆ ಭಾರತ ಎಂದಿಗೂ ಅಡ್ಡಿ ಪಡಿಸಿಲ್ಲ. ಆದರೆ ಪಾಕಿಸ್ತಾನ ಒಂದು ಕೈಯಲ್ಲಿ ಉಗ್ರರ ಉತ್ತೇಜನ ಮಾಡಿ ಮತ್ತೊಂದು ಕೈಯಲ್ಲಿ ಭಾರತದೊಂದಿಗೆ ಶಾಂತಿ ಮಾತುಕತೆ ಆಹ್ವಾನ ನೀಡಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಮೊದಲು ಜಾತ್ಯಾತೀರಾಗಿ ಎಂದು ಹೇಳಿದ್ದಾರೆ.