ಗುಜರಾತ್'ನಲ್ಲಿ ಮತ್ತೆ 10 ಸಿಂಹಗಳ ಸಾವು, ತಿಂಗಳಲ್ಲಿ 21 ಸಾವು
ದೇಶ
ಗುಜರಾತ್'ನಲ್ಲಿ ಮತ್ತೆ 10 ಸಿಂಹಗಳ ಸಾವು, ತಿಂಗಳಲ್ಲಿ 21 ಸಾವು
ಗುಜರಾತ್ ರಾಜ್ಯದ ಗಿರ್ ಅರಣ್ಯದಲ್ಲಿ ಸಿಂಹಗಳ ಸಾವಿನ ಸರಣಿ ಮುಂದುವರೆದಿದ್ದು, ಅರಣ್ಯದಿಂದ ರಕ್ಷಿಸಿ ಚಿಕಿತ್ಸೆಗೆಂದು ಕರೆ ತರಲಾಗಿದ್ದ 10 ಸಿಂಹಗಳೂ ಕೂಡ ಇದೀಗ ಸಾವನ್ನಪ್ಪಿವೆ ಎಂದು ಮಂಗಳವಾರ ತಿಳಿದುಬಂದಿದೆ...
ಅಹ್ಮದಾಬಾದ್: ಗುಜರಾತ್ ರಾಜ್ಯದ ಗಿರ್ ಅರಣ್ಯದಲ್ಲಿ ಸಿಂಹಗಳ ಸಾವಿನ ಸರಣಿ ಮುಂದುವರೆದಿದ್ದು, ಅರಣ್ಯದಿಂದ ರಕ್ಷಿಸಿ ಚಿಕಿತ್ಸೆಗೆಂದು ಕರೆ ತರಲಾಗಿದ್ದ 10 ಸಿಂಹಗಳೂ ಕೂಡ ಇದೀಗ ಸಾವನ್ನಪ್ಪಿವೆ ಎಂದು ಮಂಗಳವಾರ ತಿಳಿದುಬಂದಿದೆ.
10 ಸಿಂಹಗಳು ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಸೆ.12ರ ಬಳಿಕ ಅಭಯಾರಣ್ಯದಲ್ಲಿ ಸಾವನ್ನಪ್ಪಿದ ಸಿಂಹಗಳ ಒಟ್ಟು ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಈ ನಡುವೆ ಸಿಂಹಗಳ ಸಾವಿಗೆ ವೈರಸ್ ಕಾರಣ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಸಾವಿಗೆ ಕಾರಣವಾಗ ವೈರಸ್ ಯಾವುದು ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ.


