ಕುಸಿಯುತ್ತಿರುವ ಷೇರುಪೇಟೆ ವಹಿವಾಟು, ರೂಪಾಯಿ ಅಪಮೌಲ್ಯದ ಬಗ್ಗೆ ರಮ್ಯಾ ಟ್ವೀಟ್

ಜಾಗತಿಕ ಮಾರುಕಟ್ಟೆಯಲ್ಲಿ ಷೇರುಪೇಟೆ ವಹಿವಾಟಿನಲ್ಲಿ ತೀವ್ರ ಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಕೇಂದ್ರ ಸರ್ಕಾರದ ...
ರಮ್ಯಾ
ರಮ್ಯಾ
ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿ ಷೇರುಪೇಟೆ ವಹಿವಾಟಿನಲ್ಲಿ  ತೀವ್ರ ಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.
ಷೇರುಪೇಟೆ ಕುಸಿಯುತ್ತಿದೆ, ರೂಪಾಯಿ ಮಾಲ್ಯ ಇಳಿಯುತ್ತಿದೆ, ಬಂಡವಾಳ ಹೂಡಿಕೆದಾರರು ನಡುಗುತ್ತಿದ್ದಾರೆ. ನಾನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಂದ 900 ಪದಗಳ ಮಹತ್ವದ ಬ್ಲಾಗ್ ನಿರೀಕ್ಷಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಸೆನ್ಸೆಕ್ಸ್ ಕ್ರಾಶಿಂಗ್, ರೂಪಿ ಇಸ್ ಪಾಲಿಂಗ್, ಇನ್ ವೆಸ್ಟರ್ ಶಿವರಿಂಗ್ ಎಂದು ರಮ್ಯ ಟ್ವೀಟ್ ಮಾಡುವ ಮೂಲಕ ಅರುಣ್ ಜೈಟ್ಲಿ ಕಾಲೆಳೆದಿದ್ದಾರೆ,
ಷೇರುಮಾರುಕಟ್ಟೆ ಸಂವೇದಿ ಸೂಚ್ಯಂಕ ಗುರುವಾರ ಮತ್ತೆ ಕುಸಿತ ಕಂಡುಬಂದಿದ್ದು 1,030 ಅಂಕಗಳ ಭಾರೀ ಕುಸಿತ ಕಂಡುಬಂದು 34 ಸಾವಿರದಲ್ಲಿ ಬೆಳಗಿನ ವಹಿವಾಟು ನಡೆಸಿತು. ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ ಕಂಡುಬಂದಿದ್ದು 74 ರೂಪಾಯಿ 45 ಪೈಸೆಯಷ್ಟಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com