ಅಮೆರಿಕಕ್ಕೆ ಟಾಂಗ್; ಭಾರತ-ರಷ್ಯಾ ನಡುವಿನ ರಕ್ಷಣಾ ಒಪ್ಪಂದಗಳಿಗೆ ಬೆದರಿಕೆ ಇಲ್ಲ: ರಷ್ಯಾ ರಾಯಭಾರಿ

ರಷ್ಯಾದ ಮೇಲಿನ ಅಮೆರಿಕ ನಿಷೇಧದಿಂದ ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಒಪ್ಪಂದಳಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಭಾರತದಲ್ಲಿನ ರಷ್ಯಾ ರಾಯಭಾರಿ...
ದಿಮಿರ್ ಪುಟಿನ್-ನರೇಂದ್ರ ಮೋದಿ
ದಿಮಿರ್ ಪುಟಿನ್-ನರೇಂದ್ರ ಮೋದಿ
ನವದೆಹಲಿ: ರಷ್ಯಾದ ಮೇಲಿನ ಅಮೆರಿಕ ನಿಷೇಧದಿಂದ ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಒಪ್ಪಂದಳಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಭಾರತದಲ್ಲಿನ ರಷ್ಯಾ ರಾಯಭಾರಿ ನಿಕೋಲಾಯ್ ಕುದಶೇವ್ ಅವರು ಅಮೆರಿಕಕ್ಕೆ ಟಾಂಗ್ ನೀಡುವ ರೀತಿಯಲ್ಲಿ ಹೇಳಿದ್ದಾರೆ. 
ಅಮೆರಿಕದ ನಿರ್ಬಂಧದಿಂದ ಭಾರತ ಮತ್ತು ರಷ್ಯಾ ನಡುವಿನ ಟ್ರಂಯಾಪ್ ಕ್ಷಿಪಣಿ ಖರೀದಿ ವಹಿವಾಟಿನ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗದು ಎಂದು ಹೇಳಿದ್ದಾರೆ. 
ಅಮೆರಿಕ ಪ್ರತಿರೋಧಿಗಳನ್ನು ನಿಷೇಧಗಳ ಮೂಲಕ ಬಗ್ಗು ಬಡಿಯುವ ಕಾಯ್ದಿ ಕ್ಯಾಟ್ಸಾ(Countering America's Adversaries Through Sanctions Act)ದಿಂದ ಇತರ ದೇಶಗಳ ಮೇಲೆ ನಿರ್ಬಂಧ ವಿಧಿಸುತ್ತದೆ. 
ಇಂತಹ ಅನಿಶ್ಚಿತತೆಯ ನಡುವೆ ಭಾರತ-ರಷ್ಯಾ ನಡುವಿನ ವಾಣಿಜ್ಯ ಸಂಬಂಧಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಈಚೆಗೆ ಭಾರತಕ್ಕೆ ಭೇಟಿ ಕೊಟ್ಟಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾರತದ ಉನ್ನತ ನಾಯಕರೊಂದಿಗೆ ನಡೆಸಿರುವ ಮಾತುಕತೆ ನಡೆಸಿದ್ದಾರೆ ಎಂದರು. 
ಉಭಯ ದೇಶಗಳ ನಡುವಿನ ಕ್ಷಿಪಣಿ ಖರೀದಿ ವಹಿವಾಟಿನ ಮೇಲೆ ಅಮೆರಿಕ ನಿಷೇಧದಿಂದ ಯಾವುದೇ ದುಷ್ಪರಿಣಾವಾಗದು ಎಂದು ನಿಕೊಲಾಯ್ ಕುದಶೇವ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com