2007 ಮತ್ತು 2012ರಲ್ಲಿ ಅಂದಿನ ಯುಪಿಎ ಸರ್ಕಾರ ಒಪ್ಪಿಕೊಂಡದ್ದಕ್ಕಿಂತಲೂ ಅತ್ಯುತ್ತಮ ಬೆಲೆಯಲ್ಲಿ ಎನ್‌ಡಿಎ ಸರ್ಕಾರ ರಾಫೆಲ್ ಡೀಲ್ ಅನ್ನು ಅಂತಿಮಗೊಳಿಸಿದೆ. ಈ ವಹಿವಾಟಿನಲ್ಲಿ ನಮಗೆ ಶೀಘ್ರ ಪೂರೈಕೆ, ದೀರ್ಘ ನಿರ್ವಹಣಾ ಅವಧಿ, ಬಿಡಿ ಭಾಗಗಳ ಲಭ್ಯತೆ ಮತ್ತು ಅತ್ಯಅಗತ್ಯವಿರುವ ರಕ್ಷಣಾ ಸಾಮರ್ಥ್ಯ ಇತ್ಯಾದಿಗಳನ್ನು ಖಾತರಿ ಪಡಿಸಿಕೊಂಡಿದ್ದೇವೆ ಎಂದು ಗೋಯಲ್ ತಿಳಿಸಿದರು.