ಭಾರತ ಶ್ರೇಷ್ಠ ರಾಷ್ಟ್ರ... ಒಗ್ಗಟ್ಟಿನಿಂದ ಇರೋಣ, ನಮ್ಮ ಒಗ್ಗಟ್ಟು ಏಷ್ಯಾಗೆ ನೀಡಲಿದೆ ತಾಕತ್ತು: ಚೀನಾ

ಇಷ್ಟು ದಿನ ಭಾರತವನ್ನು ಹಿಂದಿಕ್ಕಿ ದಕ್ಷಿಣ ಏಷ್ಯಾದ ಕಿಂಗ್ ಆಗಬೇಕು ಎಂದುಕೊಳ್ಳುತ್ತಿದ್ದ ಚೀನಾ ಈಗ ಏಷ್ಯಾದ ಏಳಿಗೆಗೆ ಭಾರತ-ಚೀನಾ ಒಗ್ಗಟ್ಟು ತುಂಬಾನೆ ಮುಖ್ಯ ಎನ್ನುವುದಕ್ಕೆ ಪ್ರಾರಂಭಿಸಿದೆ.
ಮೋದಿ-ಕ್ಸೀ ಜಿನ್ ಪಿಂಗ್
ಮೋದಿ-ಕ್ಸೀ ಜಿನ್ ಪಿಂಗ್
ಕೋಲ್ಕತ್ತಾ: ಇಷ್ಟು ದಿನ ಭಾರತವನ್ನು ಹಿಂದಿಕ್ಕಿ ದಕ್ಷಿಣ ಏಷ್ಯಾದ ಕಿಂಗ್ ಆಗಬೇಕು ಎಂದುಕೊಳ್ಳುತ್ತಿದ್ದ ಚೀನಾ ಈಗ ಏಷ್ಯಾದ ಏಳಿಗೆಗೆ ಭಾರತ-ಚೀನಾ ಒಗ್ಗಟ್ಟು ತುಂಬಾನೆ ಮುಖ್ಯ ಎನ್ನುವುದಕ್ಕೆ ಪ್ರಾರಂಭಿಸಿದೆ. 
ಅಮೆರಿಕ-ಚೀನಾ ನಡುವಿನ ಟ್ರೇಡ್ ವಾರ್ ನಿಂದಾಗಿ ಚೀನಾ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದ್ದು, ಈ ನಡುವೆ ಭಾರತದೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವುದು ಚೀನಾಗೆ ಅನಿವಾರ್ಯವಾಗಿ ಪರಿಗಣಮಿಸಿದೆ. ಈ ಹಿನ್ನೆಲೆಯಲ್ಲಿ ಈಗ ಚೀನಾ ಭಾರತದೊಂದಿಗೆ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ಚೀನಾ ಭಾರತ-ಚೀನಾ ಒಗ್ಗಟ್ಟಿನಿಂದ ಇದ್ದರೆ ಏಷ್ಯಾಗೆ ತಾಕತ್ತು ಹೆಚ್ಚಲಿದೆ ಎಂದು ಹೇಳಿದೆ. 
ಭಾರತ-ಚೀನಾ ನಡುವಿನ ದ್ವಿಪಕ್ಷೀಯ ಸಹಕಾರದ ವ್ಯಾಪ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಶೈಕ್ಷಣಿಕ ಕೊಡುಕೊಳ್ಳುವಿಕೆ ನಡೆಯಬೇಕೆಂದು ಚೀನಾ ರಾಯಭಾರಿ ಕಚೇರಿ ಅಧಿಕಾರಿಗಳು ಹೇಳಿದ್ದಾರೆ. ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ವರ್ಷಾಂತ್ಯಕ್ಕೆ ಮತ್ತೆ ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂಬ ಸೂಚನೆ ನೀಡಿರುವ ಚೀನಾ ರಾಯಭಾರಿ ಕಚೇರಿ ಅಧಿಕಾರಿಗಳು ಕೋಲ್ಕತ್ತಾದಲ್ಲಿ ನಡೆಯಲಿರುವ ದುರ್ಗಾ ಪೂಜೆಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚೀನಾದ ಸಹಭಾಗಿತ್ವ ಉಭಯ ದೇಶಗಳ ಸಾಂಸ್ಕೃತಿಕ, ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸಲಿದೆ ಎಂದು ಹೇಳಿದ್ದಾರೆ. 
ಚೀನಾ-ಭಾರತ ಎರಡೂ ಶ್ರೇಷ್ಠ ರಾಷ್ಟ್ರಗಳು, ನಾವಿಬ್ಬರೂ ಒಂದಾದರೆ ಏಷ್ಯಾ-ಜಗತ್ತಿನಲ್ಲೇ ಬದಲಾವಣೆ ತರಬಹುದು ಇದಕ್ಕಾಗಿ ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಎಂದು ರಾಯಭಾರಿ ಅಧಿಕಾರಿ ಕರೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com