ವೃತ್ತಿಯಲ್ಲಿ ಮೂಲತಃ ಮಾಡೆಲ್ ಆಗಿದ್ದ ಜಹಾನ್, ಐಪಿಎಲ್ ನಲ್ಲಿ ಶಮಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಹಸೀನ್ ಜಹಾನ್ ಮತ್ತು ಶಮಿ ದಂಪತಿಗೆ ಓರ್ವ ಪುತ್ರಿ ಇದ್ದು, ಇತ್ತೀಚೆಗೆ ಜಹಾನ್ ಶಮಿ ವಿರುದ್ಧ ಕಿರುಕುಳ ಮತ್ತು ವಿವಾಹೇತರ ಸಂಬಂಧದಂತಹ ಗಂಭೀರ ಆರೋಪ ಮಾಡಿದ್ದರು. ಕೌಟುಂಬಿಕ ದೌರ್ಜನ್ಯವಲ್ಲದೆ ಶಮಿ ಮ್ಯಾಚ್ ಫಿಕ್ಸರ್ ಎಂದೂ ಆರೋಪಿಸಿದ್ದರು. ಅಲ್ಲದೆ, ಫಿಕ್ಸಿಂಗ್ ಸಲುವಾಗಿ ಪಾಕಿಸ್ತಾನದ ಮಹಿಳೆಯಿಂದ ಹಣ ಪಡೆದುಕೊಂಡಿದ್ದಾರೆ. ಅವರು ನನಗೆ ಮಾತ್ರವಲ್ಲ ದೇಶಕ್ಕೂ ದ್ರೋಹ ಮಾಡಿದ್ದಾರೆ. ಈ ಎಲ್ಲದಕ್ಕೂ ನನ್ನಲ್ಲಿ ಸಾಕ್ಷ್ಯಗಳಿವೆ ಎಂದು ಹೇಳಿ ಕೊಂಡಿದ್ದರು.