ಪುಣೆ: ತಾಯಿ ಗರ್ಭದಿಂದಲೇ ಗರ್ಭಾಶಯ ಕಸಿ ಮೂಲಕ ಮಗುವಿಗೆ ಜನ್ಮ ನೀಡಿದ ಮಹಿಳೆ!

ಮಗಳಿಗೆ ಗರ್ಭ ನಿಲ್ಲುತ್ತಿಲ್ಲವೆಂದು ತಾಯಿ ತನ್ನ ಗರ್ಭ ನೀಡಿ ಆ ಮೂಲಕ ಶಿಶು ಜನಿಸಿದ ವಿಶೇಷ ಪ್ರಕರಣ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪುಣೆ: ಮಗಳಿಗೆ ಗರ್ಭ ನಿಲ್ಲುತ್ತಿಲ್ಲವೆಂದು ತಾಯಿ ತನ್ನ ಗರ್ಭ ನೀಡಿ ಆ ಮೂಲಕ ಶಿಶು ಜನಿಸಿದ ವಿಶೇಷ ಪ್ರಕರಣ ಪುಣೆಯಲ್ಲಿ ನಡೆದಿದೆ.

ಗರ್ಭಾಶಯ ಕಸಿ ಮಾಡಿಕೊಂಡ 28 ವರ್ಷದ ಮಹಿಳೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಮ್ಮ ದೇಶದಲ್ಲಿ ಇಂತಹ ಮೊದಲ ಪ್ರಕರಣವಿದು ಎಂದು ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.

ಗುಜರಾತ್ ನ ವಡೋದರಾ ನಿವಾಸಿ ಮೀನಾಕ್ಷಿ ವಾಲನ್, 2017ರ ಮೇ ತಿಂಗಳಲ್ಲಿ ಗರ್ಭಾಶಯ ಕಸಿ ಮಾಡಿಕೊಂಡಿದ್ದರು. ಗರ್ಭಾಶಯ ಕಸಿ ಮಾಡಿಕೊಂಡು ಇಡೀ ಏಷ್ಯಾ ಮತ್ತು ಭಾರತದಲ್ಲಿ ಜನಿಸಿದ ಮೊದಲ ಶಿಶು ಇದಾಗಿದ್ದು ತನ್ನ ತಾಯಿ ಜನಿಸಿದ ಗರ್ಭದಿಂದಲೇ ಈ ಮಗು ಕೂಡ ಜನಿಸಿರುವುದು ವಿಶೇಷ.

ಮೀನಾಕ್ಷಿ ವಾಲನ್ ಗೆ ಪದೇ ಪದೇ ಗರ್ಭಪಾತವಾಗುತ್ತಿದ್ದುದರಿಂದ ಆಕೆಯ ತಾಯಿ ತನ್ನ ಗರ್ಭವನ್ನು ಮಗಳಿಗೆ ದಾನ ಮಾಡಿದ್ದರು. ಗರ್ಭಾಶಯ ಕಸಿ ಮಾಡಿಕೊಂಡ ನಂತರ ಮೀನಾಕ್ಷಿ ವಾಲನ್ ಪ್ರನಾಳ ಶಿಶು ತಾಯ್ತನ ಪ್ರಕ್ರಿಯೆ ಮೂಲಕ ಗರ್ಭ ಧರಿಸಿದ್ದರು.

ನಿನ್ನೆ ವಾಲನ್ ಪುಣೆಯ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇಂತಹ ಪ್ರಕರಣ ಭಾರತದಲ್ಲಿ ಮಾತ್ರವಲ್ಲದೆ ಇಡೀ ಏಷ್ಯಾ-ಫೆಸಿಫಿಕ್ ಪ್ರಾಂತ್ಯದಲ್ಲಿ ಮೊದಲನೆಯದ್ದು ಎನ್ನುತ್ತಾರೆ ಡಾ ನೀಟಾ ವಾರ್ಟಿ.

ಈ ಹಿಂದೆ ಸ್ವೀಡನ್, ಅಮೆರಿಕಾಗಳಲ್ಲಿ 11 ಮಂದಿ ಮಹಿಳೆಯರು ಈ ರೀತಿ ಮಗುವಿಗೆ ಜನ್ಮ ನೀಡಿದ್ದು ಭಾರತದಲ್ಲಿ ಇದು 12ಡನೆಯದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com