ತಿತ್ಲಿ ಚಂಡಮಾರುತಕ್ಕೆ ತತ್ತರಿಸಿದ ಒಡಿಶಾ: 57 ಮಂದಿ ಸಾವು, ಹಲವರು ನಾಪತ್ತೆ

ತಿತ್ಲಿ ಚಂಡಮಾರುತ ಒಡಿಶಾದಲ್ಲಿ ಭಾರೀ ಅನಾಹುತ ಸೃಷ್ಟಿ ಮಾಡಿದ್ದು, ಚಂಡಮಾರುತದಿಂದಾಗಿ ಸಂಭವಿಸಿದ ಅನಾಹುತಗಳಲ್ಲಿ ಈ ವರೆಗೂ 57 ಮಂದಿ ಸಾವನ್ನಪ್ಪಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಭುವನೇಶ್ವರ: ತಿತ್ಲಿ ಚಂಡಮಾರುತ ಒಡಿಶಾದಲ್ಲಿ ಭಾರೀ ಅನಾಹುತ ಸೃಷ್ಟಿ ಮಾಡಿದ್ದು, ಚಂಡಮಾರುತದಿಂದಾಗಿ ಸಂಭವಿಸಿದ ಅನಾಹುತಗಳಲ್ಲಿ ಈ ವರೆಗೂ 57 ಮಂದಿ ಸಾವನ್ನಪ್ಪಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ. 
ಭಾರೀ ಮಳೆಯಿಂದಾಗಿ ಗೋಡೆ ಕುಸಿತ, ಭೂಕುಸಿತ ಸಂಭವಿಸಿದ ಹಿನ್ನಲೆಯಲ್ಲಿ 57 ಮಂದಿ ಸಾವನ್ನಪ್ಪಿ ಹಲವುಮಂದಿ ನಾಪತ್ತೆಯಾಗಿದ್ದಾರೆ. ಅಲ್ಲದೆ, ರೂ. 2,765 ನಷ್ಟವಾಗಿದೆ ಎಂದು ಒಡಿಶಾ ಸರ್ಕಾರ ಹೇಳಿಕೊಂಡಿದೆ. 
ರಾಜ್ಯದಲ್ಲಿ ಭೀಕರ ಪರಿಸ್ಥಿತಿ ಎದುರಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮೊರೆ ಹೋಗಲು ಒಡಿಶಾ ಸರ್ಕಾರ ನಿರ್ಧರಿಸಿದ್ದು, ಕೂಡಲೇ ಮಧ್ಯಂತರ ಪರಿಹಾರ ನೀಡುವಂತೆ ಮನವಿ ಮಾಡಿಕೊಳ್ಳಲು ನಿರ್ಧರಿಸಿದ ಎಂದು ತಿಳಿದುಬಂದಿದೆ. 
ಕೇಂದ್ರಕ್ಕೆ ಮನವಿ ಸಲ್ಲಿಕೆ ಮಾಡುವುದಕ್ಕೂ ಮುನ್ನ ನಷ್ಟ ಕುರಿತಂತೆ ಮಾಹಿತಿ ನೀಡಿರುವ ಸರ್ಕಾರ, ಚಂಡಮಾರುತದಿಂದಾಗಿ ರೂ.2,765 ನಷ್ಟ ಎದುರಾಗಿದ್ದು, 60.11 ಲಕ್ಷ ಜನರ ಮೇಲೆ ಗಂಭೀರ ಪರಿಣಾಮ ಬೀರಿದೆ. 2.6 ಲಕ್ಷ ಹೆಕ್ಟೇರ್ ಗಳಷ್ಟು ಕೃಷಿ ನಾಶವಾಗಿದೆ. 56,930 ಮನೆಗಳು ನಾಶವಾಗಿದೆ. ಹಾಗೂ 34,951 ದೇಶೀ ಪ್ರಾಣಿಗಳು ಸಾವನ್ನಪ್ಪಿವೆ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com