ನವದೆಹಲಿ: ರಜೆ ನೀಡಿ ಕಳುಹಿಸಲಾಗಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ನಿವಾಸದ ಮುಂದೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಗುರುವಾರ ಬಂಧನಕ್ಕೊಳಪಡಿಸಲಾಗಿದೆ.
ಜನ್'ಪಥ್ ಬಳಿಯಿರುವ ವರ್ಮಾ ಅವರ ಮನೆಯ ಮುಂದೆ ಇಬ್ಬರು ವ್ಯಕ್ತಿಗಳು ಅನುಮಾಸ್ಪದವಾಗಿ ಓಡಾಡುತ್ತಿರುವುದನ್ನು ಭದ್ರತಾ ಪಡೆಗಳು ಗಮನಿಸಿದ್ದಾರೆ. ಬಳಿಕ ಇಬ್ಬರನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದಿುಬಂದಿದೆ.
ಮನೆಯ ಬಳಿಯೇ ಇದ್ದ ವ್ಯಕ್ತಿಗಳು ವರ್ಮಾ ಅವರ ಓಡಾಟಗಳನ್ನು ಗಮಿಸುತ್ತಿದ್ದರು. ಇದೀಗ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.