ಶಬರಿಮಲೆ ಹಿಂಸಾಚಾರ: ಕೇರಳದಾದ್ಯಂತ ಸುಮಾರು 2 ಸಾವಿರ ಪ್ರತಿಭಟನಾಕಾರರ ಬಂಧನ

ಶಬರಿಮಲೆ ಅಯ್ಯಪ್ಪ ದೇಗುಲದ ಆವರಣದಲ್ಲಿ ಹಿಂಸೆಗೆ ಪ್ರೇರೇಪಿಸಿದ 2 ಸಾವಿರಕ್ಕೂ ಹೆಚ್ಚು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಬರಿಮಲೆ: ಶಬರಿಮಲೆ ಅಯ್ಯಪ್ಪ ದೇಗುಲದ ಆವರಣದಲ್ಲಿ ಹಿಂಸೆಗೆ ಪ್ರೇರೇಪಿಸಿದ 2 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮನೋರಮಾ ಪತ್ರಿಕೆ ವರದಿ ಮಾಡಿರುವ ಪ್ರಕಾರ, ಸುಮಾರು 1500 ಮಂದಿಯನ್ನು ಅದಾಗ್ಯೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರತಿಭಟನಾಕಾರರ ಮೇಲೆ ಶಿಸ್ತುಕ್ರಮವಾಗಿ ಇಂದು ಮೂರನೇ ದಿನ ಕೂಡ 451 ಮಂದಿ ವಿರುದ್ಧ ಕೇಸುಗಳನ್ನು ದಾಖಲಿಸಲಾಗಿದೆ.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಂಕೆಯ ಆಧಾರದ ಮೇಲೆ 210 ಮಂದಿಯ ಫೋಟೋಗಳನ್ನು ಜಿಲ್ಲಾ ಪೊಲೀಸ್ ವರಿಷ್ಠರು ನೀಡಿದ್ದಾರೆ. ಮುಖ್ಯಮಂತ್ರಿ ಪಿನರಾಯಿ ವಿಜಯನ್ ನೇತೃತ್ವದಲ್ಲಿ ನಿನ್ನೆ ನಡೆದ ಉನ್ನತ ಮಟ್ಟದ ಸಭೆ ಬಳಿಕ ಈ ಬಂಧನ ನಡೆದಿದೆ.

ಪ್ರತಿಭಟನಾಕಾರರನ್ನು ಬಂಧಿಸಿದ ಕುರಿತು ಮಾತನಾಡಿದ ಕೇರಳ ಬಿಜೆಪಿ ಮುಖ್ಯಸ್ಥ ಪಿಎಸ್ ಶ್ರೀಧರನ್ ಪಿಳ್ಳೈ, ಭಕ್ತರ ಮೇಲೆ ಪೊಲೀಸರ ಕ್ರಮ ಖಂಡಿಸಿ ತಾವು ಹೈಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.

10ರಿಂದ 50 ವರ್ಷದೊಳಗಿನ ಯುವತಿಯರು ಮತ್ತು ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಬಹುದು ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯಕ್ಕೆ ಧಕ್ಕೆಯಾಗಿದೆ ಎಂದು ಅಲ್ಲಿನ ಭಕ್ತರು ಆರೋಪಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com