
ಮುಂಬೈ: ಎಫ್-16 ಯುದ್ಧ ವಿಮಾನವಾಗಲೀ ಅಥವಾ ಇತರೆ ರಕ್ಷಣಾ ವ್ಯವಸ್ಥೆಯನ್ನಾಗಲೀ ಕೊಳ್ಳುವಂತೆ ಭಾರತದ ಮೇಲೆ ಯಾವುದೇ ಒತ್ತಡ ಹಾಕಿಲ್ಲ ಎಂದು ಅಮೆರಿಕಾದ ಹಿರಿಯ ರಾಯಬಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮೆರಿಕಾದಿಂದ ಸುಮಾರು 15 ಬಿಲಿಯನ್ ಗೂ ಹೆಚ್ಚು ಮೊತ್ತದ ರಕ್ಷಣಾ ಸಲಕರಣೆಗಳನ್ನು ಭಾರತ ಖರೀದಿಸಿದೆ. ಉಭಯ ದೇಶಗಳ ನಡುವಿನ ರಕ್ಷಣಾ ಒಪ್ಪಂದ ವಿಸ್ತರಣೆಗೆ ಅಮೆರಿಕಾ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಮುಂಬೈಯಲ್ಲಿನ ಅಮೆರಿಕಾ ಕೌನ್ಸಲ್ ಜನರಲ್ ಎಡ್ಗಾರ್ಡ್ ಕಗನ್ ಹೇಳಿದ್ದಾರೆ.
ರಷ್ಯಾ ಜೊತೆಗೆ ಎಸ್- 400 ರಕ್ಷಣಾ ವ್ಯವಸ್ಥೆ ಒಪ್ಪಂದ ಮಾಡಿಕೊಂಡ ಬಳಿಕ ಭಾರತದ ಮೇಲೆ ಅಮೆರಿಕಾ ವ್ಯಾಪಾರ ನಿರ್ಬಂಧ ವಿಧಿಸುವ ಬೆದರಿಕೆ ಇದೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಎಡ್ಗಾರ್ಡ್ ಕಗನ್, ಎಫ್-16 ಮತ್ತಿತರ ರಕ್ಷಣಾ ಸಲಕರಣಗಳನ್ನು ಖರೀದಿಸಲು ಭಾರತದ ಮೇಲೆ ಅಮೆರಿಕಾ ಒತ್ತಡ ಹಾಕುತ್ತಿದೆ ಎಂಬುದು ಸತ್ಯಕ್ಕೆ ದೂರವಾಗಿದ್ದು, ಅಮೆರಿಕಾದ ಮಿಲಿಟರಿ ವ್ಯವಸ್ಥೆ ಭಾರತ ಸೇರಿದಂತೆ ಮತ್ತಿತರ ರಾಷ್ಟ್ರಗಳ ಸಾಮರ್ಥ್ಯವನ್ನು ಮಹತ್ವದ ಬದಲಾವಣೆ ತರಲಿವೆ ಎಂಬ ನಂಬಿಕೆ ಹೊಂದಿರುವುದಾಗಿ ತಿಳಿಸಿದರು.
ಅನೇಕ ವಿವಾದಗಳಲ್ಲಿ ಅಮೆರಿಕಾದ ನಿಲುವನ್ನು ಭಾರತ ಅರ್ಥ ಮಾಡಿಕೊಂಡಿದ್ದು, ಉಭಯ ದೇಶಗಳು ಕೆಲ ವಿಷಯಗಳನ್ನು ಸುಲಭವಾಗಿ ಪರಿಹರಿಸಿಕೊಂಡಿವೆ. ಅಮೆರಿಕದ ರಕ್ಷಣಾ ಸಂಗ್ರಹಣೆ ಪಾರದರ್ಶಕವಾಗಿದ್ದು, ಅಮೆರಿಕಾದ ವೆಬ್ ಸೈಟ್ ನಲ್ಲಿ ಎಲ್ಲಾ ಮಾಹಿತಿಯನ್ನು ಪ್ರಕಟಿಸಲಾಗಿದೆ ಎಂದು ಎಡ್ಗಾರ್ಡ್ ಕಗನ್ ತಿಳಿಸಿದರು.
Advertisement