ವಿಷಯ ಏನಪ್ಪಾ ಅಂದ್ರೆ ಹಿಂದೊಮ್ಮೆ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಎಸ್ ಎಂ ಕೃಷ್ಣ, ವಿಶ್ವಸಂಸ್ಥೆಯಲ್ಲಿ ತಮ್ಮ ಭಾಷಣ ಓದುವ ಬದಲು ಬೇರೆಯ ದೇಶದ ವಿದೇಶಾಂಗ ಮಂತ್ರಿಗಳ ಭಾಷಣ ಓದಿ ಯಡವಟ್ಟು ಮಾಡಿಕೊಂಡಿದ್ದರು. ಅಂದು ಕಾಂಗ್ರೆಸ್ ನಲ್ಲಿದ್ದ ಎಸ್ ಎಂ ಕೃಷ್ಣ ಈಗ ಬಿಜೆಪಿಯಲ್ಲಿದ್ದಾರೆ. ಯುಪಿಎ ಸರ್ಕಾರದಲ್ಲಿನ ವೈಫಲ್ಯಗಳನ್ನು ಟೀಕಿಸುವ ಭರದಲ್ಲಿ ಬಿಜೆಪಿ ನಾಯಕ ರಾಮ್ ಮಾಧವ್ "ಇಂದು ಪ್ರಧಾನಿ ಮೋದಿ ಹಾಗೂ ಸುಷ್ಮಾ ಸ್ವರಾಜ್ ಜಾಗತಿಕ ಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸುವುದಕ್ಕೆ ಶ್ರಮಿಸುತ್ತಿದ್ದಾರೆ, ಆದರೆ ಯುಪಿಎ ಸರ್ಕಾರದಲ್ಲಿದ್ದ ನಮ್ಮ ವಿದೇಶಾಂಗ ಸಚಿವರು ನಮ್ಮ ದೇಶದ ಭಾಷಣ ಓದುವುದನ್ನು ಬಿಟ್ಟು ಬೇರೆಯವರ ಭಾಷಣ ಓದಿ ಮುಜುಗರ ಉಂಟು ಮಾಡಿ, ಹಾಸ್ಯದ ವಸ್ತುವಾಗಿದ್ದರು" ಎಂದು ಹಳೆಯದ್ದನ್ನು ಕೆದಕಿದ್ದಾರೆ.