ದೆಹಲಿ: ಆತಿಥ್ಯ ನೀಡಿದವನಿಂದಲೇ ಅತ್ಯಾಚಾರಕ್ಕೊಳಗಾದ ಫ್ರಾನ್ಸ್ ನ ಯುವತಿ!

ದೆಹಲಿಯಲ್ಲಿ ತನಗೆ ಆತಿಥ್ಯ ನೀಡಿದ್ದ ವ್ಯಕ್ತಿಯಿಂದಲೇ ಫ್ರಾನ್ಸ್ ಯುವತಿಯೋರ್ವಳು ಲೈಂಗಿಕ ಕಿರುಕುಳ ಎದುರಿಸಿದ್ದಾಳೆ.
ದೆಹಲಿ: ಆತಿಥ್ಯ ನೀಡಿದವನಿಂದಲೇ ಅತ್ಯಾಚಾರಕ್ಕೊಳಗಾದ ಫ್ರಾನ್ಸ್ ನ ಯುವತಿ!
ದೆಹಲಿ: ಆತಿಥ್ಯ ನೀಡಿದವನಿಂದಲೇ ಅತ್ಯಾಚಾರಕ್ಕೊಳಗಾದ ಫ್ರಾನ್ಸ್ ನ ಯುವತಿ!
ನವದೆಹಲಿ: ದೆಹಲಿಯಲ್ಲಿ ತನಗೆ ಆತಿಥ್ಯ ನೀಡಿದ್ದ ವ್ಯಕ್ತಿಯಿಂದಲೇ ಫ್ರಾನ್ಸ್ ಯುವತಿಯೋರ್ವಳು ಲೈಂಗಿಕ ಕಿರುಕುಳ ಎದುರಿಸಿದ್ದಾಳೆ. 
ಅ.18 ರಂದು ಈ ಘಟನೆ ನಡೆದಿದ್ದು, ತನಗೆ ಆತಿಥ್ಯ ನೀಡಿದ್ದ ಮನೆಯಲ್ಲಿ ಭಾರತೀಯ ವಿದ್ಯಾರ್ಥಿಯ ತಂದೆ ಈ ಕೃತ್ಯ ಎಸಗಿದ್ದಾರೆ ಎಂದು 16 ವರ್ಷದ ಯುವತಿ ಆರೋಪಿಸಿದ್ದಾಳೆ. 
ಸ್ಟೂಡೆಂಟ್ ಎಕ್ಸ್ಚೇಂಜ್ ಕಾರ್ಯಕ್ರಮಕ್ಕಾಗಿ ದೆಹಲಿಗೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಅ.23 ರಂದು ಫ್ರಾನ್ಸ್ ನ ಯುವತಿ ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ಹೇಳಿದ್ದಾಳೆ. 
ಯುವತಿ ಹೇಳಿಕೆ ಸಂಬಂಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಯುವತಿ ತನ್ನ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ 55 ವರ್ಷದ ವ್ಯಕ್ತಿ ನಾಪತ್ತೆಯಾಗಿದ್ದು ಆತನಿಗಾಗಿ ಶೋಧಕಾರ್ಯ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com