ಪೂಂಚ್ ಬಳಿ ಪಾಕ್ ಸೇನಾ ಆಡಳಿತಾತ್ಮಕ ಕೇಂದ್ರ ಕಚೇರಿ ಮೇಲೆ ಭಾರತದ ಸೇನೆ ದಾಳಿ

ಮಹತ್ವದ ಬೆಳವಣಿಗೆಯೊಂದರಲ್ಲಿ ಪೊಂಚ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಸೇನಾ ಆಡಳಿತಾತ್ಮಕ ಕೇಂದ್ರ ಕಚೇರಿ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ.
ಪೊಂಚ್ ಸೆಕ್ಟರ್
ಪೊಂಚ್ ಸೆಕ್ಟರ್

ಜಮ್ಮು-ಕಾಶ್ಮೀರ : ಮಹತ್ವದ ಬೆಳವಣಿಗೆಯೊಂದರಲ್ಲಿ ಪೊಂಚ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಸೇನಾ ಆಡಳಿತಾತ್ಮಕ ಕೇಂದ್ರ  ಕಚೇರಿ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ.

ಅಕ್ಟೋಬರ್ 23 ರಂದು ಪೊಂಚ್ ಹಾಗೂ ಜಾಲ್ಹಾಸ್  ಬಳಿ  ಪಾಕಿಸ್ತಾನ ಶೆಲ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಈ ದಾಳಿ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಭಾರತೀಯ ಸೇನೆಯಿಂದ ಗುಂಡಿನ ದಾಳಿ ನಡೆಸಿದ ನಂತರ ಪೊಂಚ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ಹೊಗೆ ಕಾಣಿಸಿಕೊಂಡಿದೆ. ಪಾಕಿಸ್ತಾನದಿಂದ ನಿರಂತರವಾಗಿ ಒಳನುಸುಳುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ಸೇನೆ ಗರಿಷ್ಠ ಪ್ರಮಾಣದಲ್ಲಿ ಪ್ರತಿರೋಧ ನೀಡುತ್ತಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಈ ವರ್ಷದ ಜೂನ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಮುಖಾಂತರ  ಒಟ್ಟಾರೇ 283 ಪಾಕಿಸ್ತಾನ ನಿವಾಸಿಗಳು ಭಾರತಕ್ಕೆ ಬಂದಿದ್ದಾರೆ.ಭಾರತದಿಂದ ಕೇವಲ 8 ಮಂದಿ ನಾಗರಿಕರು ಮಾತ್ರ ಪಾಕಿಸ್ತಾನಕ್ಕೆ ತೆರಳಲು ಸಾಧ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com