ಶಬರಿಮಲೆ ದೇಗುಲದ ಒಳಗಡೆ ಎಲ್ಲಾ ಮಹಿಳೆಯರಿಗೂ ಅವಕಾಶ ಕೊಡಬೇಕು- ರಾಹುಲ್

ಶಬರಿಮಲೆ ದೇಗುಲದ ಒಳಗಡೆ ಎಲ್ಲಾ ಮಹಿಳೆಯರಿಗೂ ಅವಕಾಶ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ, ಈ ವಿಚಾರದಲ್ಲಿ ಕೇರಳ ಕಾಂಗ್ರೆಸ್ ಘಟಕದ ಅಭಿಪ್ರಾಯ ಭಿನ್ನವಾಗಿದೆ.
ಶಬರಿಮಲೆ ದೇಗುಲ
ಶಬರಿಮಲೆ ದೇಗುಲ
Updated on

ಇಂದೋರ್:  ಶಬರಿಮಲೆ ದೇಗುಲದ ಒಳಗಡೆ ಎಲ್ಲಾ ಮಹಿಳೆಯರಿಗೂ ಅವಕಾಶ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ, ಈ ವಿಚಾರದಲ್ಲಿ ಕೇರಳ ಕಾಂಗ್ರೆಸ್ ಘಟಕದ ಅಭಿಪ್ರಾಯ ಭಿನ್ನವಾಗಿದೆ.

 ಮಧ್ಯಪ್ರದೇಶದ ಇಂದೋರ್ ನಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಇದೊಂದು ಭಾವಾನಾತ್ಮಕ ವಿಚಾರವಾಗಿದ್ದು,ಈ ವಿಚಾರದಲ್ಲಿ  ಕೇರಳ ಕಾಂಗ್ರೆಸ್ ಘಟಕದ ಅಭಿಪ್ರಾಯ ತಮ್ಮ ವೈಯಕ್ತಿಯ  ಆಲೋಚನೆ  ಬೇರೆ ಬೇರೆಯಾಗಿದೆ ಎಂದರು.

 ಶಬರಿಮಲೆ ದೇಗುಲ ಪ್ರವೇಶ ವಿಚಾರ ಕೇರಳ ಕಾಂಗ್ರೆಸ್ ಘಟಕಕ್ಕೆ ಭಾವನಾತ್ಮಕವಾಗಿದ್ದರೆ, ನನ್ನ ದೃಷ್ಟಿಯಲ್ಲಿ ಎಲ್ಲಾ  ಮಹಿಳೆಯರು ಹಾಗೂ ಪುರುಷರಿಗೂ ಸಮಾನವಾಗಿ ಕಾಣಬೇಕು, ಎಲ್ಲಾ ಮಹಿಳೆಯರು ದೇಗುಲದ ಒಳಗಡೆ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ರಾಹುಲ್ ಗಾಂಧಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com