ದೇಶ

ರಾಹುಲ್ ಗ್ರಾಮೋಫೋನ್ ನಂತೆ , ಆತನ ಬಾಲಿಶ ಹೇಳಿಕೆಗಳನ್ನು ಜನರು ಸ್ವೀಕರಿಸುವುದಿಲ್ಲ- ಮೋದಿ

ರಾಹುಲ್ ಗ್ರಾಮೋಫೋನ್ ನಂತೆ , ಆತನ ಬಾಲಿಶ ಹೇಳಿಕೆಗಳನ್ನು ಜನರು ಸ್ವೀಕರಿಸುವುದಿಲ್ಲ- ಮೋದಿ
ಪ್ರಧಾನಿ ನರೇಂದ್ರ ಮೋದಿ
Published On :

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದನ್ನು ಪದೇ ಪದೇ ಹೇಳುವ ಗ್ರಾಮೋಪೋನ್  ಇದ್ದ ಹಾಗೆ, ಆತನ ಬಾಲಿಶ ಹೇಳಿಕೆಯನ್ನೂ ಯಾರೂ ಕೂಡಾ ಸ್ವೀಕರಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಚಾರ ಸಾಗಿರುವಂತೆ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ, ಅಭಿವೃದ್ಧಿ, ಕ್ಷಿಪ್ರ ಅಭಿವೃದ್ದಿ  ಹಾಗೂ ಎಲ್ಲರಿಗಾಗಿ ಅಭಿವೃದ್ದಿ ಎಂಬ ಅಂಶದ ಆಧಾರದ ಮೇಲೆ  ಜನತೆಯ ಬಳಿಗೆ ತೆರಳುವಂತೆ ಸೂಚಿಸಿದರು.

ಇತ್ತೀಚಿಗೆ ಶಶಿ ತರೂರು  ನೀಡಿದ್ದ ಚೇಳು ಹೇಳಿಕೆಯನ್ನು ಕಾರ್ಯಕರ್ತರು ಪ್ರಸ್ತಾಪಿಸಿದಾಗ,  ಅಂತಹ ಹೇಳಿಕೆಯಿಂದ ಅವರು  ಏನು ಪಡೆದರು ಎಂದು ಹೇಳಿದ ಪ್ರಧಾನಿ, ರಾಹುಲ್  ಗಾಂಧಿ ಈ ಹಿಂದೆ ಬಳಸುತ್ತಿದ್ದ ಗ್ರಾಮೋಪೋನ್ ಇದ್ದ ಹಾಗೆ ಹೇಳಿದ್ದನ್ನು ಪದೇ ಪದೇ ಹೇಳುತ್ತಾರೆ. ಅವರ ಹೇಳಿಕೆಯನ್ನು  ಯಾರೂ ಕೇಳುವುದಿಲ್ಲ, ನೀವೂ ಕೇಳಿ ಸಂತೋಷಪಡಿ ಆದರೆ, ಉದ್ವೇಗಗೊಳಗಾಗಬೇಡಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.