ಮೋದಿ ಸರ್ಕಾರದ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಅಮೆರಿಕಾ ಸಹಕಾರ ವೇದಿಕೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಜಾರಿಗೆ ತಂದಿರುವ ಆರ್ಥಿಕ ಮತ್ತು ...
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಜಾರಿಗೆ ತಂದಿರುವ ಆರ್ಥಿಕ ಮತ್ತು ನಿಯಂತ್ರಕ ಸುಧಾರಣೆಗಳನ್ನು ಅಮೆರಿಕಾದ ಕೈಗಾರಿಕೆ ಮತ್ತು ಉದ್ಯಮಗಳ ನಾಯಕನ್ನೊಳಗೊಂಡ ಅಮೆರಿಕಾ ಭಾರತ ಕಾರ್ಯತಂತ್ರ ಸಹಭಾಗಿತ್ವ ವೇದಿಕೆ(ಯುಎಸ್ಐಎಸ್ ಪಿಎಫ್)ಶ್ಲಾಘಿಸಿದೆ.

ಭಾರತ ನಾಯಕತ್ವ ಶೃಂಗಸಭೆಯಲ್ಲಿ ಏನೇನು ಚರ್ಚೆಗಳಾಗಿವೆ ಮತ್ತು ತೀರ್ಮಾನಗಳಾಗಿವೆ ಎಂಬ ಬಗ್ಗೆ ವೇದಿಕೆಯ ಸದಸ್ಯರು ನಂತರ ಪ್ರಧಾನಿ ಮೋದಿಯವರನ್ನು ನಿನ್ನೆ ದೆಹಲಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು. ಎರಡೂ ದೇಶಗಳಿಗೆ ಅನುಕೂಲವಾಗುವುದರಿಂದ ಹೊಸ ಅವಕಾಶಗಳನ್ನು ಸೃಷ್ಟಿಸಲು ಭಾರತದೊಂದಿಗೆ ಮುಂದಿನ ದಿನಗಳಲ್ಲಿ ಅಮೆರಿಕಾ ಇನ್ನಷ್ಟು ಸಹಭಾಗಿತ್ವ ಹೊಂದಲು ವೇದಿಕೆಯ ಸದಸ್ಯರು ಆಶಯ ವ್ಯಕ್ತಪಡಿಸಿದರು.

ಪರಸ್ಪರ ಆರ್ಥಿಕ ಸಹಕಾರದಿಂದ ಎರಡೂ ದೇಶಗಳಿಗೆ ಅನುಕೂಲವಾಗುತ್ತಿದೆ. ಭಾರತದಲ್ಲಿ ಅದು ಸ್ಟಾರ್ಟ್ ಅಪ್ ಆಗಲಿ, ಇಂಧನ, ಆರೋಗ್ಯ, ಡಿಜಿಟಲ್ ತಂತ್ರಜ್ಞಾನ ಹೀಗೆ ಹೊಸ ಕ್ಷೇತ್ರಗಳಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಅವಕಾಶಗಳನ್ನು ಅಮೆರಿಕಾ ಕಂಪೆನಿಗಳು ಬಳಸಿಕೊಳ್ಳಲಿ ಎಂದು ಪ್ರಧಾನಿ ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com