ಹೈದರಾಬಾದ್: ತುಂಬು ಗರ್ಭಿಣಿಯನ್ನು 4 ಕಿ.ಮೀ ಕಾಡಿನಲ್ಲಿ ಹೊತ್ತೊಯ್ದ ಸಂಬಂಧಿಕರು, ಮಾರ್ಗಮಧ್ಯೆ ಹೆರಿಗೆ

ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ ಈಗಲೂ ಸೂಕ್ತ ರೀತಿಯ ರಸ್ತೆ ಸಂಪರ್ಕಗಳಿಲ್ಲದ ಜನರು ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವುದು ಮುಂದುವರೆದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆಂಧ್ರಪ್ರದೇಶದಲ್ಲಿ...
ರಸ್ತೆ ಸಂಪರ್ಕವಿಲ್ಲ: ತುಂಬು ಗರ್ಭಿಣಿಯನ್ನು 4 ಕಿ.ಮೀ ಕಾಡಿನಲ್ಲಿ ಹೊತ್ತೊಯ್ದ ಸಂಬಂಧಿಕರು, ಮಾರ್ಗಮಧ್ಯೆ ಹೆರಿಗೆ
ರಸ್ತೆ ಸಂಪರ್ಕವಿಲ್ಲ: ತುಂಬು ಗರ್ಭಿಣಿಯನ್ನು 4 ಕಿ.ಮೀ ಕಾಡಿನಲ್ಲಿ ಹೊತ್ತೊಯ್ದ ಸಂಬಂಧಿಕರು, ಮಾರ್ಗಮಧ್ಯೆ ಹೆರಿಗೆ
ವಿಜಯವಾಡ: ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ ಈಗಲೂ ಸೂಕ್ತ ರೀತಿಯ ರಸ್ತೆ ಸಂಪರ್ಕಗಳಿಲ್ಲದ ಜನರು ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವುದು ಮುಂದುವರೆದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆಂಧ್ರಪ್ರದೇಶದಲ್ಲಿ ಸಂಬಂಧಿಕರು ತುಂಬು ಗರ್ಭಿಣಿಯೊಬ್ಬರನ್ನು ಕಾಡಿನಲ್ಲಿ ಸುಮಾರು 4 ಕಿ.ಮೀವರೆಗೂ ಹೊತ್ತೊಯ್ದ ಘಟನೆ ಬೆಳಕಿಗೆ ಬಂದಿದೆ. 
ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಗ್ರಾಮವೊಂದರಲ್ಲಿ ತುಂಬು ಗರ್ಭಿಣಿಯನ್ನು ಆಕೆ ಸಂಬಂಧಿಕರು ಕಾಡಿನ ಮಧ್ಯೆಯೇ ಹೊತ್ತುಕೊಂಡು ಹೋಗಿದ್ದಾರೆ. ಗ್ರಾಮದಿಂದ 7 ಕಿ.ಮೀವರೆಗೂ ಯಾವುದೇ ಆಸ್ಪತ್ರೆಗಳಿಲ್ಲ. ದುರಾದೃಷ್ಟಕರ ಸಂಗತಿಯೆಂದರೆ, ಈ ಗ್ರಾಮಕ್ಕೆ ರಸ್ತೆ ಸಂಪರ್ಕ ಕೂಡ ಸೂಕ್ತವಾಗಿಲ್ಲ. ಹೀಗಾಗಿ ಮಹಿಳೆಯನ್ನು ಸಂಬಂಧಿಕರೇ ಮರದ ಕಟ್ಟಿಗೆಯ ನೆರವಿನಿಂದ ಕಾಡಿನಲ್ಲಿಯೇ ಹೊತ್ತುಕೊಂಡು ಹೋಗಿದ್ದಾರೆ. 
ಈ ವೇಳೆ ಮಹಿಳೆಗೆ ಹೆರಿಗೆ ನೋವು ಹೆಚ್ಚಾಗಿದೆ. ಈ ವೇಳೆ ಸಂಬಂಧಿಕರು ಮಹಿಳೆಯನ್ನು ಕೆಳಗಿಳಿಸಿದ್ದಾರೆ. ಬಳಿಕ ಸಂಬಂಧಿಕರ ಸಹಾಯದೊಂದಿಗೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಸೆ.4 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 
ಜುಲೈ.29ರಂದೂ ಕೂಡ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯೇ ಇದೇ ರೀತಿಯ ಮತ್ತೊಂದು ಘಟನೆ ವರದಿಯಾಗಿತ್ತು. ರಸ್ತೆ ಸಂಪರ್ಕವಲ್ಲದ ಕಾರಣ ಗರ್ಭಿಣಿ ಮಹಿಳೆಯನ್ನು ಸಂಬಂಧಿಕರು 12 ಕಿ.ಮೀವರೆಗೂ ಆಕೆಯನ್ನು ಆಸ್ಪತ್ರೆಗೆ ಹೊತ್ತೊಯ್ದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com